ಇತ್ತೀಚಿನ ಸುದ್ದಿ
ಬೆಂಗಳೂರು ಹಿಂಸಾಚಾರ: ಹಲವು ಜಿಲ್ಲೆಗಳಿಗೆ ಆರೋಪಿಗಳ ಪರಾರಿ ಶಂಕೆ
August 17, 2020, 8:49 AM

ಬೆಂಗಳೂರು(reporterkarnataka news): ನಗರದ ಡಿ ಜೆ ಹಳ್ಳಿ ಮತ್ತು ಕೆ . ಜಿ. ಹಳ್ಳಿಯಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾದ ಕೆಲವರು ಹಲವು ಜಿಲ್ಲೆಗಳಿಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ರಾಮ ನಗರ , ತುಮಕೂರು , ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಿಗೆ ಆರೋಪಿಗಳು ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವೀಡಿಯೊದಲ್ಲಿ ಇರುವ ಎಲ್ಲ ಆರೋಪಿಗಳನ್ನು ದೃಢೀಕರಿಸಿ ಬಳಿಕ ಶೋಧ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆರೋಪಿಗಳು ಎಲ್ಲಿ ಅಡಗಿ ಕುಳಿತಿದ್ದರೂ ಅವರನ್ನು ಹುಡುಕಿ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.