ಇತ್ತೀಚಿನ ಸುದ್ದಿ
ಬೆಂಗಳೂರು ಹಿಂಸಾಚಾರ: ಪ್ರಮುಖ ಆರೋಪಿ ಖಲೀದ್ ಪೊಲೀಸ್ ವಶಕ್ಕೆ
August 20, 2020, 6:37 AM

ಬೆಂಗಳೂರು( reporterkarnataka news): ಕೆ. ಜಿ. ಹಳ್ಳಿ ಮತ್ತು ಡಿ . ಜೆ. ಹಳ್ಳಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಖಲೀದ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಖಲೀದ್ ಗಲಭೆಯ ಪ್ರಮುಖ ಆರೋಪಿ ಎಂದು ಹೇಳಲಾಗಿದೆ. ತನ್ನ ಸಹಚರರ ಜತೆ ಸೇರಿ ಗಲಭೆ ಸೃಷ್ಟಿಸಿದ್ದ ಎಂದು ಆರೋಪಿಸಲಾಗಿದೆ.
ಆರೋಪಿ ಖಲೀದ್ ರಾಜಕೀಯ ಪಕ್ಷವೊಂದರ ಸಕ್ರಿಯ ಕಾರ್ಯಕರ್ತ ಎಂಬ ಮಾಹಿತಿ ಕೂಡ ಹೊರಬಿದ್ದಿದೆ. ಹಲವು ರಾಜಕಾರಣಿಗಳ ಜತೆ ಕೂಡ ಖಲೀದ್ ನಿಕಟ ಸಂಬಂಧ ಹೊಂದಿದ್ದಾನೆ ಎಂದು ವರದಿಯಾಗಿದೆ.