ಇತ್ತೀಚಿನ ಸುದ್ದಿ
ಬೆಂಗಳೂರಿನಲ್ಲಿ ದರೋಡೆ ಆರೋಪಿಯ ಮೇಲೆ ಪೊಲೀಸ್ ಫೈರಿಂಗ್: ಬಂಧನ
December 1, 2020, 9:30 AM

ಬೆಂಗಳೂರು(reporterkarnataka news): ನಗರದಲ್ಲಿ ದರೋಡೆ ಆರೋಪಿ ಅನ್ಬನ್ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಲಗ್ಗೆರೆ ಸಮೀಪದ ಕೂಲಿ ನಗರ ಬ್ರಿಡ್ಜ್ ಬಳಿ ನಂದಿನಿ ಲೇ ಔಟ್ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಅನ್ಬನ್ ನನ್ನು ಬಂಧಿಸಲು ತೆರಳಿದ್ದ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಎಂದು ಹೇಳಲಾಗಿದೆ. ನಂದಿನಿ ಲೇ ಔಟ್ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.