ಇತ್ತೀಚಿನ ಸುದ್ದಿ
ಬೆಂಗಳೂರಿನಲ್ಲಿ ಸರಗಳ್ಳರ ಮೇಲೆ ಪೊಲೀಸ್ ಫೈರಿಂಗ್: ಇಬ್ಬರ ಬಂಧನ
August 31, 2020, 1:53 AM

ಬೆಂಗಳೂರು( reporterkarnataka news): ನಗರದ ಇಸ್ಕಾನ್ ದೇವಾಲಯ ಬಳಿ ಮಹಿಳೆಯರ ಸರಗಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಇಬ್ಬರು ಸರಗಳ್ಳರ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಸಂಜಯ್ ಮತ್ತು ಸುಭಾಷ್ ಎಂದು ಗುರುತಿಸಲಾಗಿದೆ.
ಕಳೆದ ಒಂದು ವಾರದಲ್ಲಿ ಇಬ್ಬರು ಆರೋಪಿಗಳು ಹತ್ತು ಸರಗಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸರಗಳ್ಳರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.
ಸಬ್ ಇನ್ಸ್ ಪೆಕ್ಟ್ ರ್ ವಿನೋದ್ ನಾಯಕ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.