9:42 PM Friday27 - November 2020
ಬ್ರೇಕಿಂಗ್ ನ್ಯೂಸ್
ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ ಚಿಕ್ಕಬಳ್ಳಾಪುರದ ಬಳಿ ಕಾರುಗಳಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ  ಕ್ಯಾಂಟರ್ : ನಾಲ್ವರ… ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ನಾಳೆ ಸಂಸದರ ಸಭೆ ಕರೆದ ಸಿಎಂ ಯಡಿಯೂರಪ್ಪ

ಇತ್ತೀಚಿನ ಸುದ್ದಿ

ಬೆಂಬಲ ಬೆಲೆಯಡಿಯಲ್ಲಿ ಭತ್ತ ಖರೀದಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಸೂಚನೆ

November 13, 2020, 9:06 AM

ಮಂಗಳೂರು(reporterkarnatakanews): ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ಭತ್ತ ಖರೀದಿಯನ್ನು ಮಾಡಲು ಅಗತ್ಯವಿರುವ ತಯಾರಿಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
   ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರಸ್ತುತ ಸಾಲಿನ ಕನಿಷ್ಟ ಬೆಂಬಲ ಯೋಜನೆ ಕಾರ್ಯಚರಣೆಗೆ ಸಂಬಂಧಿಸಿದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
      ರೈತರಿಂದ ಕನಿಷ್ಟ ಬೆಂಬಲ ಯೋಜನೆಯಡಿ ಸಾಮಾನ್ಯ ಭತ್ತವನ್ನು 1868 ರೂ.ಗಳಲ್ಲಿ ಹಾಗೂ ಗೇಡ್-1 ಭತ್ತಗಳನ್ನು1888 ರೂ.ಗಳಲ್ಲಿ ಖರೀದಿಸಲಾಗುವುದು ಎಂದರು.
    ಕೃಷಿ ಇಲಾಖೆ ವತಿಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ದತ್ತಾಂಶದಿಂದ ರೈತರ ಮಾಹಿತಿಯನ್ನು ಪಡೆದು ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆಯನ್ನು ಆಧಾರಿಸಿ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರು ನೋಂದಾಣಿ ಮಾಡದಂತಹಾ ರೈತರಿಂದ ಭತ್ತವನ್ನು ಸರಕಾರವು ನಿಗಧಿಪಡಿಸಿರುವ ಅಕ್ಕಿ ಗಿರಣಿಗಳ ಮೂಲಕ ಖರೀದಿಸಲಾಗುವುದು ಎಂದರು.
      ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಭತ್ತ ಖರೀದಿಸಲು ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವನ್ನು ಸಂಗ್ರಹಣಾ ಮಂಡಳಿ ಏಜೆನ್ಸಿಯನ್ನಾಗಿ ನೇಮಿಸಲಾಗಿದ್ದು, ರೈತರು ಖರೀದಿ ಕೇಂದ್ರಗಳಿಗೆ ಬಂದು ಅಲ್ಲಿಯೇ ಆನ್‍ಲೈನ್‍ನಲ್ಲಿ ನೋಂದಣಿ ಮಾಡಬೇಕೆಂದರು.
      ಪ್ರತಿದಿನ ಖರೀದಿಸುವ ಕೃಷಿ ಉತ್ಪನ್ನಗಳ ವಿವರಗಳನ್ನು ಖರೀದಿ ಏಜೆನ್ಸಿ ಪತ್ರದಲ್ಲಿ ನೀಡಿರುವ ವಹಿಯಲ್ಲಿ ದಾಖಲಿಸಬೇಕು, ಗುಣಮಟ್ಟ ಪರಿಶೀಲನೆ ಹೆಸರಿನಲ್ಲಿ ರೈತರಿಗೆ ಯಾವುದೇ ಅನಾನೂಕುಲವಾಗದಂತೆ ನೋಡಿಕೊಳ್ಳಬೇಕು ಎಂದ ಅವರು ಪ್ರತಿ ಖರೀದಿ ಕೇಂದ್ರಗಳಿಗೆ ನುರಿತ ಗುಣಮಟ್ಟ ಪರೀಕ್ಷಕರನ್ನು ನೇಮಿಸಬೇಕು ಎಂದು ಸೂಚಿಸಿದರು.
     ಸಭೆಯಲ್ಲಿ ಆಹಾರ ನಾಗರಿಕ ಇಲಾಖೆಯ ಉಪನಿರ್ದೇಶಕಿ ಕುಮಾರಿ ರಮ್ಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ಎ.ಪಿ.ಎಂ.ಸಿಯ ಉಪನಿರ್ದೇಶಕಿ ರಾಣಿ, ಕೆ.ಎಫ್.ಸಿ.ಸಿ ಶರತ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು