1:34 PM Saturday5 - December 2020
ಬ್ರೇಕಿಂಗ್ ನ್ಯೂಸ್
ಬೆಳಗಾವಿ: ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ಮತ್ತೆ ನರ್ತಿಸಲಿದೆ ಕದ್ರಿ ಸಂಗೀತ ಕಾರಂಜಿ: ಶನಿವಾರ,  ಭಾನುವಾರ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕದ್ರಿ –… ದಿಲ್ಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ  ಶ್ರೀನಿವಾಸಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಜಿ ಮೇಯರ್, ಕಾಂಗ್ರೆಸ್ ಹಿರಿಯ ನಾಯಕ, ಸಜ್ಜನ ರಾಜಕಾರಣಿ ಕೆ.ಕೆ. ಮೆಂಡನ್ ಇನ್ನಿಲ್ಲ ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ…

ಇತ್ತೀಚಿನ ಸುದ್ದಿ

ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಲು ಬಯಸುತ್ತೀರಾ ? ಇಲ್ಲಿದೆ ಮಾಹಿತಿ

October 9, 2020, 8:54 AM

ಬಳ್ಳಾರಿ(Reporter Karnataka News)

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯಿ ದತ್ತಿಗಳ ಅಧಿನಿಯಮ 1997 ರ ಕಲಂ 25 ರನ್ವಯ ಬಳ್ಳಾರಿ ಜಿಲ್ಲೆಯಲ್ಲಿರುವ ‘ಬಿ’ ಪ್ರವರ್ಗದ 10 ಮತ್ತು ‘ಸಿ’ ಪ್ರವರ್ಗದ 30 ಅಧಿಸೂಚಿತ ಸಂಸ್ಥೆಗಳ / ದೇವಸ್ಥಾನಗಳಿಗೆ ಮತ್ತು 9 ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಬೇಕಾಗಿರುವ ಹಿನ್ನೆಲೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆಯ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿಸೂಚಿತ ( ಸಂಸ್ಥೆಯ/ದೇವಸ್ಥಾನದ ಹೆಸರು, ವಿಳಾಸದ ವಿವರ ಸಹಾಯಕ ಆಯುಕ್ತರ ಕಛೇರಿ ಮುಜರಾಯಿ / ಧಾರ್ಮಿಕ ದತ್ತಿ ಶಾಖೆಯಲ್ಲಿ ಲಭ್ಯವಿದೆ). ಕನಿಷ್ಠ 25 ವರ್ಷ ವಯಸ್ಸಾಗಿರುವ ಆಸಕ್ತ ಭಕ್ತಾಧಿಗಳು, ಯಾವುದೇ ಒಂದು ಅಧಿಸೂಚಿತ ಸಂಸ್ಥೆಯ/ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯತ್ವ ಕೋರಿ ಮಾತ್ರ ಅರ್ಜಿಯನ್ನು ನಮೂನೆ 1(ಬಿ) (22ನೇ ನಿಯಮ) ನಮೂನೆಯಲ್ಲಿ ಭರ್ತಿ ಮಾಡಿ, 30 ದಿನಗಳ ಒಳಗಾಗಿ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ತಹಶೀಲ್ದಾರ್ ಕಚೇರಿ ಆವರಣ, ಬಳ್ಳಾರಿ ಕಚೇರಿಗೆ ಸಲ್ಲಿಸಬೇಕು.
ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ಉದ್ದೇಶಿಸಿರುವ 40 ದೇವಾಲಯಗಳ ವಿವರ, ಸದಸ್ಯರಾಗಲು ಇರುವ ಅರ್ಹತೆ, ಅನರ್ಹತೆಗಳು ವಿವರಗಳು ಹಾಗೂ ನಿಗದಿತ ಅರ್ಜಿ ನಮೂನೆ ಈ ಕೆಳಕಂಡ ವೆಬ್ ಸೈಟ್: httsp://temples.karnataka.gov.in  ನಲ್ಲಿ ವೀಕ್ಷಿಸಬಹುದು.
ಹೆಚ್ಚಿನ ಮಾಹಿತಿಗೆ ಬಳ್ಳಾರಿಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯಿ ದತ್ತಿಗಳ ಇಲಾಖೆಯ ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು