9:25 PM Monday1 - March 2021
ಬ್ರೇಕಿಂಗ್ ನ್ಯೂಸ್
ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ಜಾತಿ, ಮತ, ಕಟ್ಟುಪಾಡುಗಳನ್ನು ಮೀರಿ ಜನಪದ ಜನಮಾನಸದಲ್ಲಿ ನೆಲೆಗೊಂಡಿದೆ: ಎಡನೀರು ಮಠಾಧೀಶರು ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಸಚಿವ ಅಂಗಾರ ತವರಿನಲ್ಲಿ ಭಿನ್ನಮತ ಸ್ಫೋಟ: 3 ಮಂದಿ ಹಿರಿಯ ನಾಯಕರು ಬಿಜೆಪಿಯಿಂದ… ಅಥಣಿ ತಾಲೂಕಿನ ರಡೇರಹಟ್ಟಿ ಗ್ರಾಮದಲ್ಲಿ  ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮ: 4… ಒಂದೂವರೆ ತಿಂಗಳ ಅವಧಿಯಲ್ಲಿ 10 ಬಾರಿ ಇಂಧನ ದರ ಏರಿಕೆ: ಕೆಪಿಸಿಸಿ ಅಧ್ಯಕ್ಷ… ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ: ಮಿನಿ ವಿಧಾನ ಸೌಧದ ಎದುರು ಎಬಿವಿಪಿ ಪ್ರತಿಭಟನೆ;… ಮಂಗಳೂರು ಮಹಾನಗರಪಾಲಿಕೆ  2020-21ನೇ  ಸಾಲಿನ ತೆರಿಗೆ ಪೂರ್ತಿ ಪಾವತಿಸಿದರೆ ಶೇ. 5% ವಿನಾಯಿತಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ

ಇತ್ತೀಚಿನ ಸುದ್ದಿ

ಡಾ.ಜಯಶ್ರೀ ಬಿ.ಕದ್ರಿ ಅವರ ಬೆಳಕು ಬಳ್ಳಿ ಕೃತಿ ಡಾ.ಭುವನೇಶ್ವರಿ ಹೆಗಡೆ ಅವರಿಂದ ಲೋಕಾರ್ಪಣೆ

September 5, 2020, 11:58 AM

ಮಂಗಳೂರು (reporter Karnataka News)

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಡಾ.ಜಯಶ್ರೀ ಬಿ.ಕದ್ರಿ ಅವರ ‘ಬೆಳಕು ಬಳ್ಳಿ’ ಜೀವನ ಪ್ರೀತಿಯ ಬರಹಗಳು ಕೃತಿ ಬಿಡುಗಡೆ ಸಮಾರಂಭ ಶನಿವಾರ ಮಣ್ಣಗುಡ್ಡ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.


ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಜೀವನದ ಕುರಿತಾಗಿ ಧನಾತ್ಮಕ ಧೋರಣೆಯ ಪುಸ್ತಕ ಇದು. ಆತಂಕದ ಸಮಯದಲ್ಲಿ ಒಂದು ಬೆಳಕಿನ ಕಿರಣದಂತಹ ಆಶಾವಾದಿ ಲೇಖನಗಳನ್ನು ಒಳಗೊಂಡಂತಹ ಪುಸ್ತಕ. ಜಗತ್ತು ಸ್ತಬ್ಧವಾಗಿದಂತಹ ಸಂದರ್ಭದಲ್ಲಿ ಲವಲವಿಕೆಯ ಸ್ಪರ್ಶವನ್ನು ನೀಡುತ್ತದೆ. ಶಿಕ್ಷಕರ ದಿನಾಚರಣೆಯ ಸಂದರ್ಭವೇ ಲೋಕಾಪರ್ಣೆಗೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.


ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಎಲ್ಲಾ ನಿಂತು ಹೋಗಿರುವ ಸಂದರ್ಭದಲ್ಲಿ ಹಿಂದಿನ ದಿನಗಳ ಸಂಭ್ರಮಗಳೆಲ್ಲ ಕನಸುಗಳಂತೆ ಅನಿಸುತ್ತಿದೆ. ಕೊರೊನಾದ ಜತೆಗೆ ಬದುಕಲು ಕಲಿಯಬೇಕಿದೆ. ಈ ಸಂದರ್ಭ ಸಾಹಿತಿಕ ಕೆಲಸಗಳೂ ಚಟುವಟಿಕೆಯಿಂದ ಕೂಡಿರುವುದು ಖುಷಿಯ ವಿಚಾರ ಎಂದರು.
ರಥಬೀದಿ ಡಾ.ಪಿ.ದಯಾನಂದ ಪೈ- ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಸಿ.ರಾಜಶೇಖರ್ ಹೆಬ್ಬಾರ್ ಮಾತನಾಡಿದರು. ಲೇಖಕಿ ಡಾ.ಜಯಶ್ರೀ ಬಿ.ಕದ್ರಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು