ಇತ್ತೀಚಿನ ಸುದ್ದಿ
ಬೆಳಗಾವಿ ಪಾಲಿಕೆ ಕಚೇರಿ ಎದುರು ಕನ್ನಡ ಧ್ವಜ ಹಾರಿಸಿದ ತಾಳೂರಕರ್ ಅಂಗಡಿಗೆ ಬೆಂಕಿ
January 1, 2021, 2:24 PM

ಬೆಳಗಾವಿ(reporterkarnataka news): ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಮುಂದೆ ಧ್ವಜ ಸ್ತಂಭ ಸ್ಥಾಪಿಸಿ ಕನ್ನಡ ಧ್ವಜ ಹಾರಿಸಿದ್ದ ಕನ್ನಡ ಪರ ಹೋರಾಟಗಾರ ಶ್ರೀನಿವಾಸ ತಾಳೂರಕರ್ ಅವರ ಅಂಗಡಿಗೆ ಬೆಂಕಿ ಹಂಚುವ ಯತ್ನ ನ಼ಡೆದಿದೆ.
ಬೆಳಗಾವಿಯ ಶಹಾಪುರದಲ್ಲಿ ಈ ಘಟನೆ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಅದು ಗಮನಕ್ಕೆ ಬಂತು. ಇದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ.
ಶಹಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.