ಇತ್ತೀಚಿನ ಸುದ್ದಿ
ಬೆಳಗಾವಿಯಲ್ಲಿ ಕೊರೊನಾ ವ್ಯಾಪಕ: 25 ಶಿಕ್ಷಕರಿಗೆ ಸೋಂಕು, ಸರಕಾರಿ ಶಾಲೆ ಬಂದ್
January 7, 2021, 9:13 AM

ಬೆಳಗಾವಿ(reporterkarnataka news): ಹೊಸದಾಗಿ ಮೂವರು ಶಿಕ್ಷಕರಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಇದರೊಂದಿಗೆ ಕೊರೊನಾ ಸೋಂಕಿತ ಶಿಕ್ಷಕರ ಸಂಖ್ಯೆ 25ಕ್ಕೆ ಏರಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮೂರು ಸರ್ಕಾರಿ ಶಾಲೆಗಳನ್ನು ಬಂದ್ ಮಾಡಲಾಗಿದೆ.
ರಾಜ್ಯದ ಇತರ ಜಿಲ್ಲೆಗಳಲ್ಲಿ ಕೂಡ ಶಿಕ್ಷಕರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 60ಕ್ಕೂ ಹೆಚ್ಚು ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದೆ.