ಇತ್ತೀಚಿನ ಸುದ್ದಿ
ಭೀಕರ ಕಾರು ಅಪಘಾತ: ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಪತ್ನಿ, ಆಪ್ತ ಕಾರ್ಯದರ್ಶಿ ಸಾವು; ಸಚಿವರಿಗೆ ತೀವ್ರ ಗಾಯ
January 11, 2021, 10:44 PM

ಅಂಕೋಲಾ(reporterkarnataka news): ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರು ಪ್ರಯಾಣಿಸುತ್ತಿದ್ದ ಕಾರು ಅಂಕೋಲಾ ಸಮೀಪದ ಹೊಸಕಂಬಿ ಘಾಟ್ ಬಳಿ ಅಪಘಾತಕ್ಕೀಡಾಗಿದ್ದು, ಸಚಿವರ ಪತ್ನಿ ವಿಜಯಾ ನಾಯಕ್ ಹಾಗೂ ಆಪ್ತ ಕಾರ್ಯದರ್ಶಿ ಸಾವನ್ನಪ್ಪಿದ್ದಾರೆ. ಸಚಿವರು ಗಂಭೀರ ಗಾಯಗೊಂಡಿದ್ದಾರೆ.
ಸಚಿವರು ಗೋವಾದಿಂದ ಗೋಕರ್ಣಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿರುವುದು ಅಪಘಾತಕ್ಕೆ ಕಾರಣವಾಗಿದೆ.