ಇತ್ತೀಚಿನ ಸುದ್ದಿ
ಬೆದರಿಕೆಗೆ ಮಣಿಯುವುದಿಲ್ಲ, ಉತ್ತರ ಕೊರಿಯಾಕ್ಕೆ ಅಮೆರಿಕ ದೊಡ್ಡ ಶತ್ರು ಎಂದಿರುವ ಕಿಮ್ ಜಾಂಗ್
January 9, 2021, 1:20 PM

ಉತ್ತರ ಕೊರಿಯಾ: ಅಮೆರಿಕ ವಿರುದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಮತ್ತೊಮ್ಮೆ ಗುಡುಗಿದ್ದಾರೆ. ಅಮೆರಿಕದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಅದರ ಉತ್ತರ ಕೊರಿಯಾ ನೀತಿಯಲ್ಲಿ ಬದಲಾವಣೆಯಾಗುವುದಿಲ್ಲ. ಈಗಲೂ ಅಮೆರಿಕ ಉತ್ತರ ಕೊರಿಯಾದ ಅತೀ ದೊಡ್ಡ ಶತ್ರು ಎಂದು ಸರ್ವಾಧಿಕಾರಿ ಕಿಮ್ ಜಾಂಗ್ ಪುನರುಚ್ಚರಿಸಿದ್ದಾರೆ.
ಅಪರೂಪಕ್ಕೆ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉತ್ತರ ಕೊರಿಯಾ ಅಮೆರಿಕದ ಯಾವುದೇ ಬೆದರಿಕೆಗೆ ಮಣಿಯುವುದಿಲ್ಲ. ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಕಿಮ್ ಜಾಂಗ್ ಬಹಿರಂಗಪಸಿದ್ದಾರೆ.