ಇತ್ತೀಚಿನ ಸುದ್ದಿ
ಈ ಸೌಜನ್ಯ ತುಂಬಿದ ಕೃಷ್ಣನಾರು ಬಲ್ಲಿರ ನೀವು..? ಇಲ್ಲಿದೆ ಕಂಪ್ಲೀಟ್ ಮಾಹಿತಿ
August 10, 2020, 7:02 PM

ಅನುಷ್ ಪಂಡಿತ್
info.reporterkarnataka@gmail.com
ಕರದೊಳಗೆ ವೇಣು ಸೇರಿ
ಹುಣ್ಣಿಮೆ ಚಂದ್ರನೆದುರು ನಗೆಯ ಬೀರಿ
ಮನಮೋಹಕ ಕಣ್ಣಲ್ಲಿ ಸೆಳೆದು
ಸಖಿಯ ಕಾಡುವ ಮೇಘಶ್ಯಾಮನಾರಿವ ….?
ಕೊರೊನಾ ಸಂಕಷ್ಟದ ನಡುವೆ ಹಲವಾರು ಹಬ್ಬಗಳು ಬಹಳಷ್ಟು ಪೇಲವವಾಗಿ ಆಚರಿಸಲ್ಪಟ್ಟಿತು. ಇದೀಗ ಕೃಷ್ಣಾಷ್ಟಮಿಯ ಸರದಿ.
ಅಷ್ಟಮಿಗೆ ತುಳುನಾಡು ಸೇರಿದಂತೆ ಭಾರತದಾದ್ಯಂತ ವಿಶೇಷ ಮಾನ್ಯತೆ ಇದೆ. ಕೃಷ್ಣನ ಆರಾಧನೆಯ ಈ ಕಾಲದಲ್ಲಿ ವಿವಿಧ ಬಗೆಯ ಆಟ ಹಾಗೂ ಮೊಸರು ಕುಡಿಕೆ, ಕೋಲಾಟ ಸೇರಿದಂತೆ ಕೆಲವು ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತದೆ.
ಅದೇ ರೀತಿ ಡಿಜಿಟಲ್ ಪ್ಲಾಟ್ಫಾರಂನಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಕೃಷ್ಣನ ಫೋಟೊಗಳು ವೈರಲ್ ಆಗುವುದು ಕೂಡ ಹೌದು, ಕಳೆದ ಬಾರಿ ಮೊಸರು ಕುಡಿಕೆಯ ಕುಣಿತಕ್ಕೆ ಕೃಷ್ಣನ ವೇಷ ಧರಿಸಿದ್ದ ಯುವತಿಯ ವಿಡಿಯೋ ಸಖತ್ ವೈರಲ್ ಆಗಿತ್ತು.
ಈ ಬಾರಿ ತುಳುನಾಡಿನ ಯುವ ಕಲಾವಿದೆ ಒಬ್ಬರು ಸಿಕ್ಕಾಪಟ್ಟೆ ಸದ್ದು ಮಾಡ್ತ ಜನರ ಮನ ಸೆಳೆಯುತ್ತಾ ಇದ್ದಾರೆ….

ಈ ಫೋಟೊ ನೋಡಿ ಈ ಕೃಷ್ಣ ಯಾರವನು ಎಂದರೆ ತಪ್ಪಾಗುತ್ತದೆ ಯಾಕೆಂದರೆ ಆ ಕೃಷ್ಣನಾಚೆಗಿನ ಅವರು ಸೌಜನ್ಯ ಹೆಗ್ಡೆ. ಹೌದು ನೀವು ನಂಬಲಸಾಧ್ಯವಾದರು ಅವರೇ ಇದು.

ಅಷ್ಟಮಿಗೆ ಹೊಸದೇನಾದರೂ ಮಾಡಬೇಕು ಎಂದುಕೊಂಡ ಸದಾ ಚಟುವಟಿಕೆಯಿಂದ ಇರುವ ಸೌಜನ್ಯ ಹೆಗ್ಡೆ ಅವರು ಕೃಷ್ಣನ ವೇಷ ಧರಿಸಿದ ಈ ಫೋಟೊಗಳು ಎಲ್ಲರ ವಾಲ್ಪೇಪರ್, ಡಿಪಿಗಳನ್ನೆಲ್ಲ ಸೇರಿಬಿಟ್ಟಿದೆ.

ಅಂದ ಹಾಗೆ ಈ ಕನ್ಹಯ್ಯಾನ ಸೃಷ್ಟಿಯ ಹಿಂದಿನ ಕೈಚಳಕ ಅಂದರೆ ಪ್ರಸಾಧನ ಮಾಡಿ ಸುಂದರ ರೂಪ ನೀಡಿದ್ದು ಪ್ರಿಯಾ ಬಾಳಿಗ ಹಾಗೂ ಅಚ್ಚುಕಟ್ಟಾಗಿ ಫೊಟೊಕ್ಲಿಕ್ ಮಾಡಿದ್ದು ಸಂತೋಷ್ ಗೋಲ್ಡ್.

