ಇತ್ತೀಚಿನ ಸುದ್ದಿ
ಪಣೋಲಿಬೈಲು ಕ್ಷೇತ್ರದ ಅನುವಂಶಿಕ 2ನೇ ಅರ್ಚಕ ರಮೇಶ್ ಮೂಲ್ಯ ವಿಧಿವಶ
October 21, 2020, 1:00 PM

ಬಂಟ್ವಾಳ(reporterkarnataka news):
ತುಳುನಾಡಿನ ಕಾರ್ಣಿಕದ ಕ್ಷೇತ್ರವೆಂದೇ ಪ್ರಖ್ಯಾತಿ ಪಡೆದಿರುವ ಬಂಟ್ವಾಳದ ಪಣೋಲಿಬೈಲು ದೈವಸ್ಥಾನದ ಅನುವಂಶಿಕ ಎರಡನೇ ಅರ್ಚಕ ರಮೇಶ್ ಮೂಲ್ಯ (55) ಅವರು ಬುಧವಾರ ಬೆಳಗ್ಗೆ ವಿಧಿವಶರಾದರು.
ಕಳೆದ ಎರಡು ವಾರಗಳಿಂದ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮಂಗಳವಾರ ರಾತ್ರಿ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟು ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಬೆಳಗ್ಗೆ
ಅವರು ಮೃತಪಟ್ಟಿದ್ದಾರೆ.
ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.