4:24 AM Wednesday24 - February 2021
ಬ್ರೇಕಿಂಗ್ ನ್ಯೂಸ್
ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ ಪೇಜಾವರ ಶ್ರೀಗಳಿಗೆ ಗುರು ವಂದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ… ಆವಿಷ್ಕಾರ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಮಂಗಳೂರು ಅಭಿವೃದ್ಧಿ: ಡಿಸಿಎಂ ಡಾ. ಅಶ್ವಥನಾರಾಯಣ ಜನರು ಮಾಸ್ಕ್ ಧರಿಸದಿದ್ದರೆ ಮತ್ತೆ ಲಾಕ್ ಡೌನ್: ಮುಖ್ಯಮಂತ್ರಿ ನಾಗರಿಕರಿಗೆ ಎಚ್ಚರಿಕೆ ಕೊರೊನಾ ಭಯಕ್ಕೆ ಗಡಿಯಲ್ಲಿ ಹೈ ಅಲರ್ಟ್: ಕರ್ನಾಟಕ – ಮಹಾರಾಷ್ಟ್ರ ಗಡಿಗಳಲ್ಲಿ ಚೆಕ್… ವಿಜಯಪುರ ಹುಡ್ಗರ ಸಿನಿಮಾ ಕನಸು:’ ದಿ ಪ್ರಾಬ್ಲಮ್’  ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸರಕಾರಿ, ಬ್ಯಾಂಕಿಂಗ್ ಕೆಲಸ ಗಿಟ್ಟಿಸುವುದು ಈಗ ಬಹಳ ಸುಲಭ: ಶ್ಲಾಘ್ಯ ಸಂಸ್ಥೆ ಸಂಪರ್ಕಿಸಿ! ಜೋಕೆ….ಮದುವೆಗೆ ಬರ್ತಾರೆ ಮ್ಯಾರೇಜ್ ಮಾರ್ಷಲ್ !: ಫುಡ್ ಹಂಚುವವರ ಮೇಲೂ ನಿಗಾ ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಅಲಂಗಾರು ಈಶ್ವರ ಭಟ್ಟರಿಗೆ ವಿಪ್ರಭೂಷಣ ಪ್ರಶಸ್ತಿ ಪ್ರದಾನ: ವಿಶೇಷ ಗೌರವಾರ್ಪಣೆ

ಇತ್ತೀಚಿನ ಸುದ್ದಿ

ಮಹಾ ಮಳೆ: ಅಕ್ಷರಶಃ ಮುಳುಗಿದ ಬೆಂಗಳೂರು, ನೀರಿನಲ್ಲಿ ತೇಲಿ ಹೋದ ಕಾರು

October 23, 2020, 9:59 PM

ಬೆಂಗಳೂರು(reporterkarnataka news): ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿದ ವಾಯು ಭಾರ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ನಗರದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳಲ್ಲಿ ನೀರು ತುಂಬಿದ್ದು  ವಾಹನ ಸವಾರರು ಪರದಾಡುತ್ತಿದ್ದಾರೆ.

ಹೊಸಕೆರೆ ಹಳ್ಳಿಯಲ್ಲಿ ನೀರಿನ ರಭಸಕ್ಕೆ ಸಿಲುಕಿ ಕಾರು ಕೊಚ್ಚಿ ಹೋಗಿದೆ. ಮೈಸೂರು ರಸ್ತೆ , ಜೆ . ಸಿ. ನಗರ, ಕೋರಮಂಗಲ  ಪ್ರದೇಶದಲ್ಲಿ ಮಳೆಯಿಂದ ವ್ಯಾಪಕ ಹಾನಿ ಸಂಭವಿಸಿದೆ. ನೀರು ರಸ್ತೆಯ ಮೇಲೆ ಹಳ್ಳದಂತೆ ಹರಿಯುತ್ತಿದೆ.

ಸಚಿವ ಅಶೋಕ್ ಹೊಸಕೆರೆ ಹಳ್ಳಿ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆಯಿದೆ.

ಇತ್ತೀಚಿನ ಸುದ್ದಿ

ಜಾಹೀರಾತು