ಇತ್ತೀಚಿನ ಸುದ್ದಿ
ಭಾರೀ ಮಳೆ: ಬೆಂಗಳೂರಿನ ಹೊಸಕರೆಯಲ್ಲಿ ಜನಜೀವನ ಅಸ್ತವ್ಯಸ್ತ, ಬದುಕಿಗಾಗಿ ಜನರ ಪರದಾಟ
October 24, 2020, 4:16 PM

ಬೆಂಗಳೂರು(reporterkarnataka news): ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿದ ವಾಯು ಭಾರ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಹೊಸಕೆರೆ ಹಳ್ಳಿಯಲ್ಲಿ ನೀರಿನ ರಭಸಕ್ಕೆ200ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿದ್ದು, ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ.

ರಾಜಕಾಲುವೆ ದುರಸ್ತಿ ಹಿನ್ನೆಲೆಯಲ್ಲಿ ಹೊಸಕೆರೆ ಹಳ್ಳಿಯಲ್ಲಿ ಭಾರೀ ಹಾನಿ ಸಂಭವಿಸಿದೆ. ನೀರು ಉಕ್ಕಿ ಹರಿದ ಪರಿಣಾಮ , ಸಮೀಪದ 200 ಮನೆಗಳಿಗೆ ನೀರು ನುಗ್ಗಿದೆ.
ಗವಿ ಗಂಗಾಧರೇಶ್ವರ ದೇವಸ್ಥಾನದ ಗೋಡೆಗೆ ಹಾನಿಯಾಗಿದೆ. ಇಂದು ಕೂಡ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ