ಇತ್ತೀಚಿನ ಸುದ್ದಿ
ಬೆಂಗಳೂರು ಗಲಭೆ: ಇಂದು ಎಫ್ ಎಸ್ ಎಲ್ ವರದಿ, ಮಾಜಿ ಮೇಯರ್ ಗೆ ಢವ ಢವ
August 25, 2020, 2:40 AM

ಬೆಂಗಳೂರು(reporterkarnataka news): ನಗರದ ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇಂದು ಎಫ್ ಎಸ್ ಎಲ್ ವರದಿ ಕೈ ಸೇರಲಿದೆ. ಮಾಜಿ ಮೇಯರ್ ಸಂಪತ್ ರಾಜ್ ಮತ್ತು ಕಾರ್ಪೋರೇಟರ್ ಜಾಕೀರ್ ಅವರ ಮೊಬೈಲನ್ನು ಎಫ್ ಎಸ್ ಎಲ್ ಗೆ ಕಳುಹಿಸಿಕೊಡಲಾಗಿತ್ತು.
ಇದರ ವರದಿ ಆಧಾರದಲ್ಲಿ ಸಂಪತ್ ರಾಜ್ ಮತ್ತು ಜಾಕೀರ್ ವಿರುದ್ಧ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ಮೊಬೈಲ್ ಡಾಟಾ ಅಳಿಸಿ ಹಾಕಿದ್ದ ಹಿನ್ನೆಲೆಯಲ್ಲಿ ಅದನ್ನು ವೈಜ್ಞಾನಿಕ ಪರಿಶೀಲನೆಗಾಗಿ ಎಫ್ ಎಸ್ ಎಲ್ ಗೆ ಕಳುಹಿಸಿಕೊಡಲಾಗಿತ್ತು.