ಇತ್ತೀಚಿನ ಸುದ್ದಿ
ಬೆಂಗಳೂರು ಗಲಭೆ: ಮಾಜಿ ಮೇಯರ್ ಆಪ್ತನ ಬಂಧನ
August 18, 2020, 8:15 AM

ಬೆಂಗಳೂರು(reporterkarnataka news):
ನಗರದಲ್ಲಿ ವ್ಯಾಪಕ ನಾಶ ನಷ್ಟಕ್ಕೆ ಕಾರಣವಾದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಅವರ ಆಪ್ತ ಅರುಣ್ ಎಂಬವರನ್ನು ಬಂಧಿಸಲಾಗಿದೆ.
ಕಳೆದ 9 ವರ್ಷಗಳಿಂದ ಅರುಣ್ ಸಂಪತ್ ರಾಜ್ ಜತೆ ಗುರುತಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ಗಲಭೆಯ ಪ್ರಮುಖ ಆರೋಪಿ ಜತೆ ಅರುಣ್ ದೂರವಾಣಿ ಸಂಪರ್ಕದಲ್ಲಿದ್ದ ಎಂದು ಆರೋಪಿಸಲಾಗಿದೆ.
ಇದೇ ವೇಳೆ ಅರುಣ್ ಚಟುವಟಿಕೆ ಕುರಿತಂತೆ ಏನು ತಿಳಿದಿಲ್ಲ ಎಂದು ಸಂಪತ್ ರಾಜ್ ಹೇಳಿದ್ದಾರೆ.
ಕಾರ್ಪೋರೇಟರ್ ಗಳಾದ ಸಂಪತ್ ರಾಜ್ ಮತ್ತು ಝಾಕೀರ್ ಅವರ ವಿಚಾರಣೆ ಮುಂದುವರಿದಿದೆ. ಪ್ರತ್ಯೇಕವಾಗಿ ಇಬ್ಬರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ