ಇತ್ತೀಚಿನ ಸುದ್ದಿ
ಭಾರಿ ಮಳೆಗೆ ಉಪ್ಪಿನಂಗಡಿಯಲ್ಲಿ ಕೊಚ್ಚಿ ಹೋದ ಟೆಂಪೋ
August 8, 2020, 9:10 AM

ಉಪ್ಪಿನಂಗಡಿ( reporterkarnataka news): ದಕ್ಷಿಣ ಕನ್ನಡದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಉಪ್ಪಿನಂಗಡಿ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ನೇತ್ರಾವತಿ ಮತ್ತು ಕುಮಾರಾ ಧಾರ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಈ ಮಧ್ಯೆ ಉಪ್ಪಿನಂಗಡಿ ಸಮೀಪದ ಕಾಂಚನ ಎಂಬಲ್ಲಿ ಟೆಂಪೋವೊಂದು ನೀರಿನಲ್ಲಿ ಕೊಚ್ಚಿಹೋಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ
ಇನ್ನೊಂದೆಡೆ ಬಂಟ್ವಾಳದಲ್ಲಿ ಹಳೆ ಸೇತುವೆ ಬಳಿ ಕೆಲವು ಯುವಕರು ಪ್ರವಾಹದ ಸಂದರ್ಭದಲ್ಲಿ ಕೂಡ ಹುಚ್ಚು ಸಾಹಸಕ್ಕೆ ಮುಂದಾಗಿದ್ದಾರೆ. ನದಿ ನೀರಿಗೆ ಜಂಪ್ ಮಾಡಿ ಈಜಾಡುತ್ತಿದ್ದಾರೆ. ಅವರ ಸಾಹಸ ಮೆಚ್ಚಬೇಕು. ಆದರೆ ಪರಿಸ್ಥಿತಿ ಮಾತ್ರ ಅಪಾಯಕಾರಿದೆ.