ಇತ್ತೀಚಿನ ಸುದ್ದಿ
ಬಾಲಪರಾಧಿ ಬೇಡ, ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು ಎಂದು ಸಂಬೋಧಿಸಿ
December 30, 2020, 9:09 AM

ಮಂಗಳೂರು (reporterkarnataka): ಮಕ್ಕಳ ರಕ್ಷಣಾ ನಿರ್ದೇಶನಾಲಯವು ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ, 2015 ನ್ನು ಅನುಷ್ಠಾನಗೊಳಿಸುತ್ತಿದ್ದು,
ಈ ಕಾಯ್ದೆ ಅನುಸಾರ ಕಾನೂನಿನ ಸಂಘರ್ಷಕ್ಕೆ ಒಳಪಟ್ಟಿರುವ ಮಕ್ಕಳನ್ನು ಬಾಲಪರಾಧಿಗಳು ಎಂದು ಸಂಬೋಧಿಸುವ ಬದಲು “ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು” ಎಂದು ಹೇಳಬೇಕು. ಅಂತೆಯೇ ಸುಧಾರಣಾ ಸಂಸ್ಥೆಗಳು ಅಥವಾ ಕರೆಕ್ಷನಲ್ ಹೋಮ್ಸ್ ಎಂದು ಸಂಬೋಧಿಸುವ ಬದಲು “ಮಕ್ಕಳ ಪಾಲನಾ ಸಂಸ್ಥೆಗಳು” ಎಂದೂ ಸಂಬೋಧಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.