ಇತ್ತೀಚಿನ ಸುದ್ದಿ
ಆಸ್ಟ್ರೇಲಿಯಾದಿಂದ ಬಂದು ಕಣ್ಣೀರಿಟ್ಟ ತಲ ಕಾವೇರಿ ಅರ್ಚಕ ನಾರಾಯಣಾಚಾರ್ ಪುತ್ರಿಯರು
August 12, 2020, 5:48 AM

ಮಡಿಕೇರಿ(reporterkarnataka news):
ವಿದೇಶದಲ್ಲಿ ನೆಲೆಸಿರುವ ತಲ ಕಾವೇರಿ ಸಮೀಪದ ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ನೆಲಸಮವಾದ ಮನೆಯಡಿಗೆ ಸಿಲುಕಿದ ಅರ್ಚಕ ನಾರಾಯಣಾಚಾರ್ ಅವರ ಇಬ್ಬರು ಪುತ್ರಿಯರು ತವರಿಗೆ ಆಗಮಿಸಿದ್ದು, ತಮ್ಮ ಮನೆ ಇದ್ದ ಜಾಗಕ್ಕೆ ಬಂದು ಅಳಿದುಳಿದ ಪಳಿಯುಳಿಕೆಗಳನ್ನು ಕಂಡು ಕಣ್ಣೀರು ಇಟ್ಟಿದ್ದಾರೆ.
ನಾರಾಯಣಾಚಾರ್ ಅವರ ಇಬ್ಬರು ಪುತ್ರಿಯರು ಆಸ್ಟ್ರೇಲಿಯಾದಿಂದ ತಮ್ಮ ಮಕ್ಕಳ ಜತೆ ತಲ ಕಾವೇರಿಗೆ ಆಗಮಿಸಿದ್ದಾರೆ. ಎನ್ ಡಿಆರ್ ಎಫ್ ಕಾರ್ಯಾಚರಣೆ ವೇಳೆ ದೊರೆತ ಮನೆ ಸಾಮಗ್ರಿಗಳನ್ನು ಕಂಡು ಅಪ್ಪ ಅಮ್ಮನ ನೆನಪಿಸಿ ಕಣ್ಣೀರು ಹಾಕಿದ್ದಾರೆ. ಮೊಮ್ಮಕ್ಕಳು ಕೂಡ ತಮ್ಮ ಹೆತ್ತವರೊಂದಿಗೆ ರೋಧಿಸುತ್ತಿರುವುದು ಕಂಡು ಬಂತು.
ದುರಂತಕ್ಕೆ ಮುನ್ನ ದಿನ ನಾರಾಯಣಾಚಾರ್ ಎರಡು ದಿನ ಬಿಟ್ಟು ಮನೆ ಖಾಲಿ ಮಾಡುವ ಚಿಂತನೆ ನಡೆಸಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಕಾಳುಮೆಣಸು ಹಾಗೂ ಏಲಕ್ಕಿಯೇ ಅವರು ಮನೆ ಖಾಲಿ ಮಾಡಲು ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಮನೆಯಲ್ಲಿರುವ 30 ಕ್ವಿಂಟಾಲ್ ಕಾಳು ಮೆಣಸು, 15 ಕ್ವಿಂಟಾಲ್ ಏಲಕ್ಕಿ ಬಿಟ್ಟು ಹೋಗುವುದು ಹೇಗೆ ಎಂಬ ಚಿಂತೆ ಅವರಲ್ಲಿತ್ತು ಎಂಬ ಅಂಶ ತಿಳಿದು ಬಂದಿದೆ.