ಇತ್ತೀಚಿನ ಸುದ್ದಿ
ಅಶಕ್ತ, ಬಡ ಕುಟುಂಬಗಳಿಗೆ ವೀಲ್ ಚಯರ್, ಸ್ಮಾರ್ಟ್ ಟಿವಿ, ಪುಡ್ ಕಿಟ್, ಬಟ್ಟೆಬರೆ ವಿತರಣೆ
December 12, 2020, 5:54 PM

ಮಲಪುರಂ(reporterkarnataka news): ಬಡ ಹಾಗೂ ಅಶಕ್ತ ಕುಟುಂಬಕ್ಕೆ ತಲೆಹೊರೆ ಕಾರ್ಮಿಕರ ಮುಖ್ಯಸ್ಥ ಸದಾಶಿವನ್ ನೇತೃತ್ವದಲ್ಲಿ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಫೋಲಿಯೋದಿಂದ ಶಾಶ್ವತ ಅಂಗವೈಕಲ್ಯವನ್ನು ಹೊಂದಿದ ನಂದನಾ ಎಂಬ ಬಾಲಕಿಗೆ ವೀಲ್ ಚಯರ್ ನೀಡಲಾಯಿತು. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ದೃಷ್ಟಿಯಿಂದ ಸ್ಮಾರ್ಟ್ ಟಿವಿ ವಿತರಿಸಲಾಯಿತು.
ಇನ್ನೂ ಹಲವು ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಕೆಲವು ಬಡ ಕುಟುಂಬಗಳಿಗೆ ಬಟ್ಟೆಬರೆ ನೀಡಲಾಯಿತು.