ಇತ್ತೀಚಿನ ಸುದ್ದಿ
ಸೇವಾಂಜಲಿ ಟ್ರಸ್ಟ್ ಆರೋಗ್ಯ ಕಾರ್ಡ್ ಮುಖ್ಯಮಂತ್ರಿ ಯಡಿಯೂರಪ್ಪ ಬಿಡುಗಡೆ
November 5, 2020, 2:11 PM

ಮಂಗಳೂರು(reporterkarnataka news):
ಸಮಾಜಮುಖಿ ಕಾರ್ಯಗಳಿಂದ ಜನಮಾನಸವನ್ನು ಗೆದ್ದಿರುವ ಮಂಗಳೂರಿನ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ನೂತನ ಕೊಡುಗೆ ಸೇವಾಂಜಲಿ ಆರೋಗ್ಯ ಕಾರ್ಡ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ನಗರದ ಓಶಿಯನ್ ಪರ್ಲ್ ಹೋಟೇಲಿನಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಅವರಿಗೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿರುವ ಜನಪರ ಸೇವಾಕಾರ್ಯಗಳನ್ನು ಮಂಗಳೂರು ನಗರ ದಕ್ಷಿಣ ಶಾಸಕರೂ, ಟ್ರಸ್ಟ್ ಅಧ್ಯಕ್ಷರೂ ಆಗಿರುವ ವೇದವ್ಯಾಸ ಕಾಮತ್ ವಿವರಿಸಿದರು.
ಸೇವಾಂಜಲಿ ಟ್ರಸ್ಟ್ ಕಾರ್ಯಗಳು ಹೀಗೆ ನಿರಂತರವಾಗಿ ನಡೆದು ಸಮಾಜದ ದುರ್ಬಲ, ಅಶಕ್ತರಿಗೆ ಸಹಾಯವಾಗಲಿ, ಈ ಟ್ರಸ್ಟ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪ್ರಮುಖರಿಗೆ, ಕಾರ್ಯಕರ್ತರಿಗೆ ಶುಭವಾಗಲಿ ಎಂದು ಸಿಎಂ ಯಡಿಯೂರಪ್ಪನವರು ಆರೋಗ್ಯ ಕಾರ್ಡ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮೇಯರ್ ದಿವಾಕರ ಪಾಂಡೇಶ್ವರ್, ರಾಜ್ಯ ಕೈಗಾರಿಕಾ ಪ್ರಕೋಷ್ಟದ ಸಂಚಾಲಕರಾದ ಪ್ರದೀಪ್ ಪೈ, ಶಾಸಕರಾದ ಉಮಾನಾಥ ಕೋಟ್ಯಾನ್, ಟ್ರಸ್ಟ್ ಪ್ರಮುಖರಾದ ಚೇತನ್ ಕಾಮತ್ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದರು.