ಇತ್ತೀಚಿನ ಸುದ್ದಿ
ನನ್ನ ಜೀವ ಅಪಾಯದಲ್ಲಿದೆ, ವಕೀಲರ ಭೇಟಿಗೂ ಅವಕಾಶ ನೀಡಿಲ್ಲ ಎಂದ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಾಬ್
November 8, 2020, 5:24 PM

ಮುಂಬೈ(reporterkarnataka news): ಬಂಧನದಲ್ಲಿರುವ ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯ ಸಂಪಾದಕ ಅರ್ನಾಬ್ ಗೋ ಸ್ವಾಮಿ, ತಲೋಜಾ ಜೈಲಿನಲ್ಲಿ ನನ್ನ ಜೀವಕ್ಕೆ ಅಪಾಯವಿದೆ. ನನಗೆ ವಕೀಲರನ್ನು ಭೇಟಿಯಾಗಲು ಕೂಡ ಅವಕಾಶ ನೀಡಿಲ್ಲ ಎಂದು ದೂರಿದ್ದಾರೆ.
ಅರ್ನಬ್ ಅವರನ್ನು ಪೊಲೀಸ್ ಬಸ್ ನಲ್ಲಿ ತಲೋಜಾ ಜೈಲಿಗೆ ಸ್ಥಳಾಂತರಿಸುವ ಸಮಯದಲ್ಲಿ ಪೊಲೀಸ್ ಬಸ್ ನ ಕಿಟಕಿಗೆ ಮುಚ್ಚಿದ ಪರದೆಯನ್ನು ಸರಿಸಿ ಅವರು ತನ್ನ ದುಗುಡವನ್ನು ಹೇಳಿಕೊಂಡಿದ್ದಾರೆ. ತನಗೆ ಜೀವಾಪಾಯವಿದೆ. ಇಡೀ ದೇಶಕ್ಕೆ ಈ ವಿಷಯವನ್ನು ತಿಳಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಅರ್ನಾಬ್ ಅವರನ್ನು ಪೊಲೀಸರು ಇದೀಗ ನವಿ ಮುಂಬೈ ಬಳಿ ಇರುವ ತಲೋಜಾ ಜೈಲಿಗೆ ಶಿಫ್ಟ್ ಮಾಡಿದ್ದಾರೆ.
ಅಲಿಭಾಗ್ ನ್ಯಾಯಾಲಯ ಅರ್ನಾಬ್ ಗೋ ಸ್ವಾಮಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಕೊರೋನಾ ಕಾರಣದಿಂದಾಗಿ ಅಲಿ ಭಾಗ್ ನಲ್ಲಿ ತಾತ್ಕಾಲಿಕ ಜೈಲಿನಲ್ಲಿ ಅವರನ್ನು ಇರಿಸಲಾಗಿತ್ತು.
ತಲೋಜಾ ಜೈಲ್ಲಿನಲ್ಲಿ ಭೂಗತ ಪಾತಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಭೂಗತ ಪಾತಕಿಗಳಾದ ಅಬು ಸಲೇಂ ಮತ್ತು ಅರುಣ್ ಗಾವ್ಳಿ ಕೂಡ ಇಲ್ಲಿ ಶಿಕ್ಷೆ ನುಭವಿಸುತ್ತಿದ್ದಾರೆ.