9:37 PM Sunday29 - November 2020
ಬ್ರೇಕಿಂಗ್ ನ್ಯೂಸ್
ಕಲಬುರ್ಗಿಯಲ್ಲಿ ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನ ದಿಕ್ಕೆಟ್ಟು ಓಡಿದರು ಭಾರೀ ಹಿಂಸಾಚಾರ, ವಾಹನಗಳಿಗೆ ಬೆಂಕಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ: ರಾಜ್ಯದ ವಿವಿಧಡೆ ಡಿಸೆಂಬರ್ 1ರಿಂದ ಮಳೆ? ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ಕದ್ರಿ ಮಂಜುನಾಥನಿಗೆ ಬಿಜೆಪಿ ಮೊರೆ ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ: ಪಂಚಾಮೃತ, ಕ್ಷೀರಾಭಿಷೇಕ ಸಂಪನ್ನ ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಹೈದರಾಬಾದ್ ತಲುಪಿದ ಪ್ರಧಾನಿ ಮೋದಿ: ಬಯೋಟೆಕೆ ಸಂಸ್ಥೆಗೆ ಭೇಟಿ, ವಿಜ್ಞಾನಿಗಳ ಜತೆ ಸಮಾಲೋಚನೆ 

ಇತ್ತೀಚಿನ ಸುದ್ದಿ

ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಾಬ್ ಬಂಧನ ತಪ್ಪೇ? ಮುಂಬೈ ಪೊಲೀಸ್ ಕ್ರಮ ಅತಿರೇಕವೇ? ಸತ್ಯಾಸತ್ಯತೆ ಏನು?

November 4, 2020, 6:05 PM

ಮುಂಬೈ(reporterkarnataka news): ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋ ಸ್ವಾಮಿ ಬಂಧನವಾಗಿದೆ. ವಂಚನೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಒಂದು ವರ್ಗ ಇದನ್ನು ವಿರೋಧಿಸಿದರೆ, ಇನ್ನೊಂದು ವರ್ಗ ಪೊಲೀಸ್ ಕ್ರಮವನ್ನು ಸಮರ್ಥಿಸಿದೆ.

ಇಂಟಿರಿಯರ್ ಡಿಸೈನರ್ ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬೆಳಗ್ಗೆ ಮುಂಬೈ ಪೊಲೀಸರು ಅರ್ನಬ್ ಅವರನ್ನು ಅವರ ನಿವಾಸದಲ್ಲಿ ಬಂಧಿಸಿದ್ದಾರೆ. 

ಕ್ಲೋಸ್ ಮಾಡಿದ ಆತ್ಮಹತ್ಯೆ ಪ್ರಕರಣಕ್ಕೆ ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸರಕಾರ ಮರು ಜೀವ ನೀಡಿದೆ. ಒಮ್ಮೆ ಮುಚ್ಚಿ ಹಾಕಿದ ಪ್ರಕರಣವನ್ನು ಮತ್ತೆ ಓಪನ್ ಮಾಡಿರುವುದು ಹೊಸತೇನಲ್ಲ. ಈ ಹಿಂದೆಯೂ ಹಲವು ಪ್ರಕರಣಗಳ ಮರು ತನಿಖೆಯಾಗಿದೆ. ಇದೀಗ ಅನ್ವಯ್ ನಾಯಕ್ ಕುಟುಂಬದ ಮನವಿ ಮೇರೆಗೆ ಆತ್ಮಹತ್ಯೆ ಪ್ರಕರಣವನ್ನು ಮರು ತನಿಖೆ ಮಾಡಲಾಗುತ್ತಿದೆ.

ಅನ್ವಯ್ ನಾಯಕ್ ಡೆತ್ ನೋಟ್

ಇನ್ನು ಅರ್ನಬ್ ಬಂಧನಕ್ಕೆ ಮುನ್ನ ಮುಂಬೈ ಪೊಲೀಸ್ ಅಧಿಕಾರಿಗಳು ತಮ್ಮ ಜತೆ ವಿಚಾರಣೆಗೆ ಸಹಕರಿಸುವಂತೆ, ಠಾಣೆಗೆ ಬರುವಂತೆ ಪರಿಪರಿಯಾಗಿ ಮನವಿ ಮಾಡಿದ್ದಾರೆ. ಒಬ್ಬ ಡೆಸಿಗ್ನೆಟೆಡ್ ಅಧಿಕಾರಿ ನಿಮ್ಮನ್ನು ಬಂಧಿಸಲಾಗಿದೆ ಎಂದು ಹೇಳಿದ ಬಳಿಕ ಕಾನೂನು ಪ್ರಕಾರ ಕೊಸರಾಡಿಕೊಳ್ಳುವಂತಿಲ್ಲ. ಬದಲಿಗೆ ಪೊಲೀಸ್ ಅಧಿಕಾರಿ ಕರೆದುಕೊಂಡು ಹೋಗುವಲ್ಲಿಗೆ ಅವರನ್ನು ಹಿಂಬಾಲಿಸಬೇಕು. ಆದರೆ ಅರ್ನಬ್ ಅವರು ಡೆಸಿಗ್ನೆಟೆಡ್ ಅಧಿಕಾರಿ ಹೇಳಿದ ಬಳಿಕವೂ ಪೊಲೀಸರ ಜತೆ ಹೋಗಲು ಒಪ್ಪಿ ಕೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಜನಸಾಮಾನ್ಯರಿಗಾದರೆ ನಾಲ್ಕು ಬಾರಿಸಿ ಜತೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಅರ್ನಬ್ ಅವರನ್ನು ಸೋಫಾದಿಂದ ಎಬ್ಬಿಸಲು ಇಬ್ಬರು ಅಧಿಕಾರಿಗಳು ಕೈಯಲ್ಲಿ ಹಿಡಿದು ಮೇಲಕ್ಕೆ ಎಳೆಯುತ್ತಾರೆ ಹಾಗೂ ಮನೆಯಿಂದ ಹೊರಗೆ ಪೊಲೀಸ್ ವ್ಯಾನ್ ವರೆಗೆ ಎಳೆದುಕೊಂಡು ಹೋಗುತ್ತಾರೆ. ಕಾನೂನು ದೃಷ್ಟಿಯಲ್ಲಿ ಒಬ್ಬ ಪತ್ರಕರ್ತ ಹಾಗೂ ಒಬ್ಬ ಜನಸಾಮಾನ್ಯ ಸಮಾನ ಆಗಿರುವುದರಿಂದ ಪೊಲೀಸ್ ಕ್ರಮವೇನು ಅತಿರೇಖವಲ್ಲ. ಅರ್ನಬ್ ಅವರು ಕೂಡ ರಿಪಬ್ಲಿಕ್ ಟಿವಿ ನ್ಯೂಸ್ ರೂಮ್ ನಲ್ಲಿ ಕೂತು ಪತ್ರಿಕಾ ಧರ್ಮವನ್ನು ಚಾಚು ತಪ್ಪದೆ ಪಾಲಿಸಿದವರೇನಲ್ಲ. ಜಡ್ಜ್ ತರಹ, ತಾನೊಬ್ಬ ಬ್ರಹಸ್ಪತಿ ಎನ್ನುವ ರೀತಿಯಲ್ಲಿ ಅವರು ವರ್ತಿಸಿದ್ದೇ ಹೆಚ್ಚು. ಮಾಧ್ಯಮ ಎನ್ನುವುದು ಜನಸಾಮಾನ್ಯರಿಗೆ ಧ್ವನಿಯಾಗ ಬೇಕು, ಆದರೆ ಅರ್ನಬ್ ಪ್ರಭುತ್ವದ ಪರವಾಗಿಯೇ ಮಾತನಾಡಿದ್ದು ಹೆಚ್ಚು. 

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಇದೇ ಅರ್ನಬ್ ಬೊಬ್ಬೆ ಹಾಕಿದಾಗ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿಲ್ಲವೇ? ಅದೇ ರೀತಿ ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣ ಮರು ತನಿಖೆ ನಡೆಸುವುದರಲ್ಲಿ ತಪ್ಪೇನಿದೆ? ಈ ಪ್ರಕರಣದಲ್ಲಿ ಅರ್ನಬ್ ಪಾತ್ರವಿಲ್ಲದಿದ್ದರೆ ಅವರೇಕೆ ಭಯಪಡಬೇಕು? ಈ ದೇಶದಲ್ಲಿ ಹೂತು ಹಾಕಿದ ಶವವನ್ನು ಮೇಲಕ್ಕೆತ್ತಿ ಮರು ತನಿಖೆ ನಡೆಸಿಲ್ವೇ?. 20 ವರ್ಷ ಹಳೆಯ ಕೇಸಿಗೆ ಮರು ಜೀವ ನೀಡಿಲ್ವೇ? ಹೀಗಿರುವಾಗ ಅನ್ವಯ್ ಆತ್ಮಹತ್ಯೆ ಕುರಿತು ಮರು ತನಿಖೆ ಯಾಕೆ ಮಾಡಬಾರದು.? ಎಲ್ಲಕ್ಕಿಂತ ಮಿಗಿಲಾಗಿ ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೇ ಆಧಾರ ಸ್ತಂಭವಾದ ಮಾಧ್ಯಮ ರಂಗವನ್ನು ತನ್ನ ಮೂಗಿನ ನೇರಕ್ಕೆ ಅರ್ನಬ್ ಬಳಸಿದ್ದು ರಿಪಬ್ಲಿಕ್ ಟಿವಿ ನೋಡಿದ ಯಾವುದೇ ಪ್ರಜ್ಞಾವಂತರಿಗೆ ಅರಿವಾಗಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು