11:25 AM Tuesday24 - November 2020
ಬ್ರೇಕಿಂಗ್ ನ್ಯೂಸ್
ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ  ಉದಯೋನ್ಮುಖ ಕ್ರಿಕೆಟಿಗ ನವದೀಪ್ ಸೈನಿಗೆ ಹುಟ್ಟುಹಬ್ಬದ ಶುಭ ಕೋರಿದ ಕೊಹ್ಲಿ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ: ನಾಳೆ ಸಿಎಂ ಯಡಿಯೂರಪ್ಪ ಜತೆ ಪ್ರಧಾನಿ ಮೋದಿ ಚರ್ಚೆ ರಾಜಕೀಯ ರಂಗದಲ್ಲಿ ಕುತೂಹಲ ಕೆರಳಿಸಿದ ಸಚಿವ ಸೋಮಣ್ಣ ದಿಢೀರ್ ದೆಹಲಿ ಭೇಟಿ

ಇತ್ತೀಚಿನ ಸುದ್ದಿ

ಮಜಾಭಾರತಕ್ಕೆ ಆರಾಧನಾ ಭಟ್ ಮತ್ತೆ ಎಂಟ್ರಿ:  ಈ ಬಾರಿ ಬಾಲ ನಟಿಯಲ್ಲ, ಯುವ ಕಲಾವಿದೆ!

November 13, 2020, 7:39 AM


ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com
ಇಡೀ ಕರ್ನಾಟಕದ ಕನ್ನಡಿಗರ ಗಮನ ಸೆಳೆದ ಆರಾಧನಾ ಭಟ್ ಇದೀಗ ಮತ್ತೆ ಪ್ರಸಾರವಾಗುತ್ತಿರುವಮಜಾಭಾರತಕ್ಕೆ ಎಂಟ್ರಿ ಕೊಟ್ಟಿದ್ದಾಳೆ.
img src=”http://reporterkarnataka.com/wp-content/uploads/2020/11/20201113_072702-291×300.jpg” alt=”” width=”291″ height=”300″ class=”alignnone size-medium wp-image-9255″ />
ನಟನೆ, ನೃತ್ಯ, ಗಾಯನ, ನಿರೂಪಣೆ ಮೂಲಕ ಕರಾವಳಿ ಮಾತ್ರವಲ್ಲದೆ ಇಡೀ ರಾಜ್ಯದ ಜನರ ಮನಗೆದ್ದ ಆರಾಧನಾ ಈ ಬಾರಿ ಯುವ ಕಲಾವಿದೆಯಾಗಿ ತನ್ನ ಛಾಪು ಮೂಡಿಸಲಿದ್ದಾಳೆ.


ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸ್ ಮಾಡಿದ ಆರಾಧನಾ ಭಟ್ ಮೈಸೂರಿನ ರಾಜಗುರು ಹಾಗೂ ನಿಡ್ಡೋಡಿಯ ಪದ್ಮಶ್ರೀ ಭಟ್ ಅವರ ಪುತ್ರಿ.

Maja bharatha
ವಿಶೇಷವೆಂದರೆ ಈಕೆ ಕೊರೊನಾ ಸೋಂಕು ಎಲ್ಲೆಡೆ ಹಬ್ಬಿದಾಗ ಎಲ್ಲರೂ ಮನೆಯಲ್ಲಿ ದಿಗ್ಬಂಧನಕ್ಕೊಳಗಾದರೆ ಈಕೆ ಮಾತ್ರ ಫುಲ್ ಬ್ಯುಸಿಯಾಗಿದ್ದಳು ಕೊರೊನಾ ಕಾಲದಲ್ಲಿ ಒಂದು ನಿಮಿಷವನ್ನೂ ವ್ಯರ್ಥ ಮಾಡದೆ ತನ್ನನ್ನು ದುಡಿಸಿಕೊಂಡಿದ್ದಾಳೆ.

ಆರಾಧನಾ ಸಂಸ್ಥೆಯ ಮೂಲಕ ಆನ್ ಲೈನ್ ನಲ್ಲಿ ನಿತ್ಯವೂ ಹಾಡುವ ಸ್ಪರ್ಧೆ, ನೃತ್ಯ ನಡೆಯುತ್ತಲೇ ಇತ್ತು. ಆಲ್ಬಂ ಸಾಂಗ್ ಗಳಲ್ಲಿ ಕೂಡ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಒಟ್ಟಿನಲ್ಲಿ ಕರ್ನಾಟಕ ದ ಮನೆ ಮಾತಾಗಿರುವ ಆರಾಧನ ಭಟ್ ನಿಮ್ಮೆಲ್ಲರ ನ್ನು ರಂಜಿಸಲು ನವೆಂಬರ್ 7 ರಿಂದ ಕಲ್ಲರ್ಸ್ ಕನ್ನಡದಲ್ಲಿ ಮತ್ತೆ ಬರ್ತಾ ಇದ್ದಾಳೆ. ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಮಜಾಭಾರತ ಪ್ರಸಾರವಾಗುತ್ತದೆ.


ಸಂಗೀತ ನಿರ್ದೇಶಕ ಗುರುಕಿರಣ್  ಹಾಗೂ ಖ್ಯಾತ ಚಿತ್ರನಟಿ ರಚಿತಾ ರಾಮ್ ಅವರು ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ. ಭೂಮಿ ಶೆಟ್ಟಿ ನಿರೂಪಣೆ ಯಲ್ಲಿ, ಹರೀಶ್ ರಾಜ್ ಅವರ ಕ್ವಾಮಿಡಿ ಪಂಚ್ ನಲ್ಲಿ ಮಜಾಭಾರತ ಮತ್ತೆ ಬರ್ತಾ ಇದೆ. ಆರಾಧನಾಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು