4:22 AM Wednesday24 - February 2021
ಬ್ರೇಕಿಂಗ್ ನ್ಯೂಸ್
ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ ಪೇಜಾವರ ಶ್ರೀಗಳಿಗೆ ಗುರು ವಂದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ… ಆವಿಷ್ಕಾರ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಮಂಗಳೂರು ಅಭಿವೃದ್ಧಿ: ಡಿಸಿಎಂ ಡಾ. ಅಶ್ವಥನಾರಾಯಣ ಜನರು ಮಾಸ್ಕ್ ಧರಿಸದಿದ್ದರೆ ಮತ್ತೆ ಲಾಕ್ ಡೌನ್: ಮುಖ್ಯಮಂತ್ರಿ ನಾಗರಿಕರಿಗೆ ಎಚ್ಚರಿಕೆ ಕೊರೊನಾ ಭಯಕ್ಕೆ ಗಡಿಯಲ್ಲಿ ಹೈ ಅಲರ್ಟ್: ಕರ್ನಾಟಕ – ಮಹಾರಾಷ್ಟ್ರ ಗಡಿಗಳಲ್ಲಿ ಚೆಕ್… ವಿಜಯಪುರ ಹುಡ್ಗರ ಸಿನಿಮಾ ಕನಸು:’ ದಿ ಪ್ರಾಬ್ಲಮ್’  ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸರಕಾರಿ, ಬ್ಯಾಂಕಿಂಗ್ ಕೆಲಸ ಗಿಟ್ಟಿಸುವುದು ಈಗ ಬಹಳ ಸುಲಭ: ಶ್ಲಾಘ್ಯ ಸಂಸ್ಥೆ ಸಂಪರ್ಕಿಸಿ! ಜೋಕೆ….ಮದುವೆಗೆ ಬರ್ತಾರೆ ಮ್ಯಾರೇಜ್ ಮಾರ್ಷಲ್ !: ಫುಡ್ ಹಂಚುವವರ ಮೇಲೂ ನಿಗಾ ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಅಲಂಗಾರು ಈಶ್ವರ ಭಟ್ಟರಿಗೆ ವಿಪ್ರಭೂಷಣ ಪ್ರಶಸ್ತಿ ಪ್ರದಾನ: ವಿಶೇಷ ಗೌರವಾರ್ಪಣೆ

ಇತ್ತೀಚಿನ ಸುದ್ದಿ

ಒಂದೇ ತಿಂಗಳಲ್ಲಿ ಅರ್ಧಕೋಟಿಗು ಅಧಿಕ ಜನ ಉದ್ಯೋಗ ಕಳೆದುಕೊಂಡರು:ಕೊರೊನಾ ಕಾರಣ !

August 20, 2020, 2:50 AM

ನವದೆಹಲಿ (Reporter Karnataka News)

ಕೊರೊನಾ ವೈರಸ್ ಆರ್ಥಿಕವಾಗಿ ಅನೇಕ ಜನರ ಬೆನ್ನೆಲುಬನ್ನೇ ಮುರಿದು ಹಾಕಿದೆ ಎನ್ನುವುದಕ್ಕೆ ಪೂರಕವಾಗಿ ಜುಲೈ ತಿಂಗಳೊಂದರಲ್ಲೇ 50ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ಭಾರತೀಯ ಆರ್ಥಿಕತೆ ನಿಗಾ ಕೇಂದ್ರ ನೀಡಿದ್ದು, ಇದು ಕಳವಳಕಾರಿಯಾಗಿದೆ.

ಇದರೊಂದಿಗೆ ಕೊರೋನಾ ಆರಂಭವಾದ ಬಳಿಕ ಉದ್ಯೋಗ ನಷ್ಟಅನುಭವಿಸಿದ ವೇತನ ವರ್ಗದವರ ಸಂಖ್ಯೆ 1.89 ಕೋಟಿಗೆ ಹೆಚ್ಚಳವಾಗಿದೆ.
ಕಳೆದ ಏಪ್ರಿಲ್‌ನಲ್ಲಿ ವೇತನ ಆದಾಯ ಹೊಂದಿರುವ 1.77 ಕೋಟಿ ನೌಕರರ ಉದ್ಯೋಗ ಹೋಗಿತ್ತು. ಮೇ ತಿಂಗಳಿನಲ್ಲಿ 1 ಲಕ್ಷ ಮಂದಿ ನೌಕರಿ ಕಳೆದುಕೊಂಡಿದ್ದರು. ಆದರೆ ಜೂನ್‌ನಲ್ಲಿ 39 ಲಕ್ಷ ಮಂದಿಗೆ ಕೆಲಸ ಸಿಕ್ಕಿತ್ತು. ಇದೀಗ ಜುಲೈನಲ್ಲಿ 50 ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಭಾರತೀಯ ಆರ್ಥಿಕತೆ ನಿಗಾ ಕೇಂದ್ರ ಮಾಹಿತಿ ನೀಡಿದೆ.

ದೇಶದ ಒಟ್ಟಾರೆ ಉದ್ಯೋಗಗಳಲ್ಲಿ ಮಾಸಿಕ ವೇತನ ಪಡೆಯುವವರ ಪ್ರಮಾಣ ಶೇ.21ರಷ್ಟಿದೆ. ಆರ್ಥಿಕತೆಗೆ ಹೊಡೆತ ಬಿದ್ದಾಗ ಬೇಗನೆ ಚೇತರಿಸಿಕೊಳ್ಳುವುದು ಇದೇ ವರ್ಗದ ಉದ್ಯೋಗಿಗಳು. ಏಪ್ರಿಲ್‌ನಲ್ಲಿ ಶೇ.15ರಷ್ಟು ಸಂಬಳದಾರ ನೌಕರರು ಕೆಲಸ ಕಳೆದುಕೊಂಡಿದ್ದರು.
ವಿಶೇಷ ಎಂದರೆ, ವೇತನದಾರ ನೌಕರರ ಕೆಲಸ ಸುಲಭವಾಗಿ ಹೋಗುವುದಿಲ್ಲ. ಒಮ್ಮೆ ಹೋದರೆ, ಅದನ್ನು ಮರಳಿ ಗಳಿಸುವುದು ಕಷ್ಟ. ಹೀಗಾಗಿ ವೇತನ ವರ್ಗದಲ್ಲಿ ಕೆಲಸ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಎಂದು ಸಂಸ್ಥೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು