ಇತ್ತೀಚಿನ ಸುದ್ದಿ
ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಜಾ ಭಾರತ ಖ್ಯಾತಿಯ ಬಾಲನಟಿ ಆರಾಧನಾಗೆ ಡಿಸ್ಟಿಂಕ್ಷನ್
August 10, 2020, 1:06 PM

ಮೂಡುಬಿದರೆ(reporterkarnataka news):
2020 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೂಡುಬಿದರೆ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಆರಾಧನ ಭಟ್ ಶೇ. 95 ಅಂಕಗಳಿಸಿ ಡಿಸ್ಟಿಂಕ್ಷನ್ ಪಡೆದಿದ್ದಾರೆ.
ಮಜಾಭಾರತ ಖ್ಯಾತಿಯ ಬಾಲನಟಿಯಾದ ಆರಾಧನಾ ಅವರು ಶೇ.95 ಅಂಕ ಪಡೆಯುವ ಮೂಲಕ ಕಲಿಕೆಯಲ್ಲಿಯೂ ತಾನು ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ. 7 ಚಲನಚಿತ್ರ ಹಾಗೂ ಎರಡು ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾರೆ. ಅರದಿರಲಿ ಬದುಕು ಆರಾಧನಾ ತಂಡ ಕಟ್ಟಿಕೊಂಡು ಸಮಾಜ ಸೇವೆಯಲ್ಲೂ ಎಳೆಯ ವಯಸ್ಸಿನಲ್ಲೇ ತೊಡಗಿಕೊಂಡಿದ್ದಾರೆ. ಈಕೆ ರಿಪೋರ್ಟರ್ ಕರ್ನಾಟಕದ ಬ್ರಾಂಡ್ ಅಂಬಾಸಿಯಡರ್ ಕೂಡ ಹೌದು.