ಇತ್ತೀಚಿನ ಸುದ್ದಿ
ಆರಾಧನಾ ಭಟ್ ನಟಿಸಿದ ‘ಓ ಮೈ ಲವ್ ‘ ಡಿ.12ರಂದು ಬೆಂಗಳೂರು ಪಿವಿಆರ್ ನಲ್ಲಿ ಬಿಡುಗಡೆ
December 6, 2020, 7:12 PM

ಬೆಂಗಳೂರು(reporterkarnataka news):
ಗುರುದೇವ್ ಆರ್ ಹಕಾರಿ ಅವರ ಕನ್ನಡ ಆಲ್ಬಮ್ ಸಾಂಗ್ ‘ಓ ಮೈ ಲವ್’ ಬೆಂಗಳೂರಿನ ರಾಜಾಜಿನಗರದ ಓರಿಯನ್ ಮಾಲ್ ನ ಪಿವಿಆರ್ ನಲ್ಲಿ ಡಿಸೆಂಬರ್ 12 ರ ಸಂಜೆ 5 ಕ್ಕೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳ್ಳಲಿದೆ.
ಜೀವನ್ ಗಂಗಾಧರಯ್ಯ ಅವರ ಪರಿಕಲ್ಪನೆ, ಸಾಹಿತ್ಯ ಹಾಗೂ ನಿರ್ದೇಶನದಲ್ಲಿ ಓ ಮೈ ಲವ್ ಇರ್ಮಿಸಲಾಗಿದೆ.
ರಾಜ ರಾವ್ ಅಂಚಲ್ಕರ್ ಅಲ್ಬಮ್ ಸಾಂಗ್ ಗೆ ಛಾಯಾಗ್ರಹಣ ಮಾಡಿದ್ದಾರೆ. ಸಂಗೀತವನ್ನು
ಜತಿನ್ ದರ್ಶನ್ – ಸತ್ಯ ರಾಧಾಕೃಷ್ಣ ನೀಡಿದ್ದಾರೆ. ಅಕ್ಷಯ್ ಪಿ ರಾವ್ ಅವರ ಸಂಕಲನದಲ್ಲಿ ನಡೆದ ಅಲ್ಬಮ್ ಸಾಂಗನ್ನು ಪ್ರಭಾಕರ್ ಬಿ.ಪಿ. ನಿರ್ಮಾಣ ಮಾಡಿದ್ದಾರೆ.
ತುಷಾರ್ ಗೌಡ (ಡ್ರಾಮಾ ಜೂನಿಯರ್ಸ್) ಹಾಗೂ ಆರಾಧನಾ ಭಟ್ (ಮಜಾಭಾರತ) ನಟಿಸಿದ್ದಾರೆ.