12:48 PM Tuesday24 - November 2020
ಬ್ರೇಕಿಂಗ್ ನ್ಯೂಸ್
ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ  ಉದಯೋನ್ಮುಖ ಕ್ರಿಕೆಟಿಗ ನವದೀಪ್ ಸೈನಿಗೆ ಹುಟ್ಟುಹಬ್ಬದ ಶುಭ ಕೋರಿದ ಕೊಹ್ಲಿ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ: ನಾಳೆ ಸಿಎಂ ಯಡಿಯೂರಪ್ಪ ಜತೆ ಪ್ರಧಾನಿ ಮೋದಿ ಚರ್ಚೆ ರಾಜಕೀಯ ರಂಗದಲ್ಲಿ ಕುತೂಹಲ ಕೆರಳಿಸಿದ ಸಚಿವ ಸೋಮಣ್ಣ ದಿಢೀರ್ ದೆಹಲಿ ಭೇಟಿ

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ ಪೇಜ್ ನಲ್ಲಿ ಮಕ್ಕಳ ದಿನಾಚರಣೆ, ದೀಪಾವಳಿ ಸಂಭ್ರಮ  

November 15, 2020, 9:29 AM

ಮಂಗಳೂರು(reporterkarnataka news):

ವಾಯ್ಸ್ ಆಫ್ ಆರಾಧನಾ ಪೇಜ್ ನಲ್ಲಿ ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಅದ್ದೂರಿ ಆಗಿ ನಡೆಯಿತು. ಮಕ್ಕಳಿಗೆ ಪ್ಯಾಷನ್ ಶೋ, ಬಣ್ಣದ ತಗಡಿನ ತುತ್ತೂರಿ ವಿಶೇಷ ಹಾಡು, ಡಾನ್ಸ್, ನಟನೆ, ಕಥೆ, ಭಾಷಣ ನಡೆಯಿತು. ಜವಾಹರಲಾಲ್ ನೆಹರು ಅವರ ವೇಷಭೂಷಣದಲ್ಲಿ ಮಕ್ಕಳು ಕಂಗೊಳಿಸಿದರು. ಕಾರ್ಕಳದ ಸೂರ್ಯ ಪುರೋಹಿತ್ ಅವರ  ಜವಾಹರಲಾಲ್ ನೆಹರು ಅವರ ರಂಗೋಲಿ ಎಲ್ಲರ  ಮನ ಸೆಳೆಯಿತು. ಪುರಾಣ ಪುಣ್ಯ ಕಥೆಯಲ್ಲಿ ನಿರೀಕ್ಷಾ ಹಾಗೂ ಭಾಗ್ಯ ಶ್ರೀ ಗಮನ ಸೆಳೆದರು.

ಬಾಲ ಪ್ರತಿಭೆಗಳಾದ  ಸಾನ್ವಿ, ನಮನಾ ದಾವಣಗೆರೆ, ನಿರೀಕ್ಷಾ ವಿಟ್ಲ, ಭಾಗ್ಯಶ್ರೀ ಕುಂಚಿನಡ್ಕ, ಹಸ್ತಿಕಾ ಸುಳ್ಯ, ನಾಲ್ಕು ವಯಸ್ಸಿನ  ಪುಟಾಣಿ ಬಾಲ ಪ್ರತಿಭೆ ಲಾಸ್ಯ ಸನಿಲ್ ಅವರ ಲಾಫಿಂಗ್ ಬುದ್ದ ನ ಪ್ಯಾನ್ಸಿ ಡ್ರೆಸ್ ಅದ್ಬುತ ವಾಗಿತ್ತು.


ಸಂಜೆ  ದೀಪಾವಳಿ ಸಡಗರ ಹೊಸ ಬಟ್ಟೆ ಧರಿಸಿ ದೀಪಗಳನ್ನು ಹಚ್ಚಿ ಸಂಭ್ರಮಿಸಿದರು. ಪುಟಾಣಿ ಮಕ್ಕಳು, ದೊಡ್ಡವರು ದೀಪಗಳ ರಂಗೋಲಿ  ಮಾಡಿ ಖುಷಿ ಪಟ್ಟರು.  ಭರತನಾಟ್ಯ ಕಲಾವಿದರಾದ ಲಾಲಿತ್ಯ, ಸಂಜನಾ ಮೈತ್ರಿ  ಅವರ ಲಾಲಿತ್ಯ, ಸಂಜನಾ ಮೈತ್ರಿ  ಅವರ ದೀಪಾಂಜಲಿ ನೃತ್ಯ ತುಂಬಾ ಚೆನ್ನಾಗಿತ್ತು. ಬಾಲ ಪ್ರತಿಭೆ ಅವನಿ ಸುಳ್ಯ ಮಹಾಲಕ್ಮಿ ದೇವಿಯ  ಅವತಾರದಲ್ಲಿ ಸಾಕ್ಷಾತ್ ಲಕ್ಷ್ಮೀ ಆಗಿ ಕಂಗೊಳಿಸಿದಳು.


ಹೀಗೆ 50 ಕ್ಕಿಂತಲೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಮಕ್ಕಳ ದಿನಾಚರಣೆ ಜೊತೆ  ವಾಯ್ಸ್ ಆಫ್ ಆರಾಧನಾ ದೀಪಾವಳಿಯನ್ನು ಅದ್ದೂರಿ ಆಗಿ ಆಚರಿಸಿತು.

ಇತ್ತೀಚಿನ ಸುದ್ದಿ

ಜಾಹೀರಾತು