ಇತ್ತೀಚಿನ ಸುದ್ದಿ
ಕರಾವಳಿಗೆ ನಾಳೆ 90 ಕಿಮೀ. ವೇಗದಲ್ಲಿ ಅಪ್ಪಳಿಸಲಿದೆ ಬುರೇವಿ ಚಂಡಮಾರುತ
December 2, 2020, 8:48 AM

ತಿರುವನಂತಪುರಂ(reporterkarnataka news): ಬುರೇವಿ ಚಂಡಮಾರುತ ಗುರುವಾರ ಭಾರತ ಪ್ರವೇಶಿಸಲಿದೆ. ಕನ್ಯಾಕುಮಾರಿಯಿಂದ 240 ಕಿಲೋ ಮೀಟರ್ ದೂರದಲ್ಲಿ ಚಂಡಮಾರುತ ನೆಲೆ ನಿಂತಿದೆ. ಗಂಟೆಗೆ 15 ಕಿಲೋ ಮೀಟರ್ ಅದರ ಪ್ರಸಕ್ತ ವೇಗ. ಮುಂದಿನ 12 ಗಂಟೆಗಳಲ್ಲಿ ಅದರ ವೇಗ ಹೆಚ್ಚಾಗಲಿದೆ. ಅದು ಗಂಟೆಗೆ 90 ಕಿಲೋ ಮೀಟರ್ ವೇಗ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ
ಬುರೇವಿ ಚಂಡಮಾರುತ ಇಂದು ರಾತ್ರಿ ಶ್ರೀಲಂಕಾ ತಲುಪಲಿದೆ. ನಾಳೆ ಮಧ್ಯಾಹ್ನ ಚಂಡಮಾರುತ ಕನ್ಯಾಕುಮಾರಿ ತಲುಪಲಿದೆ. ಬಳಿಕ ಅರಬಿ ಸಮುದ್ರದತ್ತ ತೆರಳಲಿದೆ.