2:44 PM Tuesday26 - January 2021
ಬ್ರೇಕಿಂಗ್ ನ್ಯೂಸ್
ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!…

ಇತ್ತೀಚಿನ ಸುದ್ದಿ

ಆ್ಯಪ್ ಆಧಾರಿತ ತ್ವರಿತ ಸಾಲ ನೀಡಿ ಗ್ರಾಹಕರಿಗೆ ವಂಚನೆ: ಚೀನಾದ ಪ್ರಜೆ ಸಹಿತ ನಾಲ್ವರ ಬಂಧನ

December 27, 2020, 10:36 AM

ಹೈದರಾಬಾದ್(reporterkarnataka news):

ಸಾಲ ನೀಡುವ ಆ್ಯಪ್ ಆಧಾರಿತ ಕಂಪನಿಗಳ ವಂಚನೆ ಪ್ರಕರಣಗಳು ಒಂದೊಂದಾಗಿ ಹೊರ ಬರುತ್ತಿದ್ದು, ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.

 ಚೀನಾ ಪ್ರಜೆಯ ನೇತೃತ್ವದಲ್ಲಿ ನಡೆಯುತ್ತಿದ್ದ “ಕ್ಯೂಬೆವೊ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್” (ಸ್ಕೈಲೈನ್) ಎಂಬ ಕಾಲ್ ಸೆಂಟರ್‌ ಮೇಲೆ ಸೈಬರಾಬಾದ್‌ನ ಸೈಬರ್‌ ಅಪರಾಧ ಪೊಲೀಸರು ದಾಳಿ ನಡೆಸಿ ಚೀನಾದ ಪ್ರಜೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ಇದರ ಮುಖ್ಯ ಕಚೇರಿ “ಸ್ಕೈಲೈನ್ ಇನ್ನೋವೇಶನ್ಸ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್” ಎಂಬ ಹೆಸರಿನಲ್ಲಿದ್ದು, ದೆಹಲಿಯಲ್ಲಿದೆ. ಜಿಕ್ಸಿಯಾ ಜಾಂಗ್ ಮತ್ತು ಉಮಾಪತಿ ಅಜಯ್ ಇದರ ನಿರ್ದೇಶಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಂಪನಿಯ ಮೂಲಕ ಒಟ್ಟು 11 ರೀತಿಯ ತ್ವರಿತ ಸಾಲಗಳನ್ನು ನೀಡುತ್ತಿದ್ದು, ಭಾರಿ ಮರುಪಾವತಿಯನ್ನು ಪಡೆಯುತ್ತಿದ್ದರು. ಸಾಲ ಪಾವತಿಸದ ಸಾಲಗಾರರಿಗೆ ತಾವು ನಡೆಸುತ್ತಿದ್ದ ಕಾಲ್ ಸೆಂಟರ್‌ಗಳ ಮೂಲಕ ವ್ಯವಸ್ಥಿತವಾಗಿ ನಿಂದನೆ, ಕಿರುಕುಳ, ಬೆದರಿಕೆಗಳನ್ನು ಹಾಕುತ್ತಿದ್ದರು. ಅಲ್ಲದೆ ಸಾಲ ಪಡೆದವರ ಸಂಬಂಧಿಕರು ಮತ್ತು ಕುಟುಂಬ ಸದಸ್ಯರಿಗೆ ನಕಲಿ ಕಾನೂನು ನೋಟಿಸ್ ಕಳುಹಿಸಿ ಸಾಲಗಾರರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ತಮ್ಮ ಸಾಲ ನೀಡುವ ಅಪ್ಲಿಕೇಷನ್‌ ಅನ್ನು ಸಾಲಗಾರರ ಸಂಪರ್ಕದಲ್ಲಿರುವವರ ಫೋನ್ ಸಂಖ್ಯೆ ಸೇರಿದಂತೆ ಇತರ ಮೊಬೈಲ್ ಮಾಹಿತಿಗಳನ್ನು ಕೂಡಾ ಪಡೆಯುವಂತೆ ಅಭಿವೃದ್ದಿಪಡಿಸಿದ್ದರು. ಅಲ್ಲದೆ ಇದು ಗ್ರಾಹಕರ ಐಡಿ ಪ್ರೂಫ್‌‌, ಪ್ಯಾನ್ ಕಾರ್ಡ್, ಕೆವೈಸಿ ದಾಖಲೆ, ಬ್ಯಾಂಕ್ ಖಾತೆಗಳು ಸೇರಿದಂತೆ ಹಲವು ವಿವರಗಳನ್ನು ಸಂಗ್ರಹಿಸುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು