9:22 AM Thursday3 - December 2020
ಬ್ರೇಕಿಂಗ್ ನ್ಯೂಸ್
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸರಕಾರ ಚರ್ಚೆ: 35 ಸಂಘಟನೆಗಳಿಗೆ ಆಹ್ವಾನ ಬುರವಿ ಚಂಡಮಾರುತದಿಂದ ಶ್ರೀಲಂಕಾದಲ್ಲಿ ವ್ಯಾಪಕ ಹಾನಿ, ಹಲವು ಮನೆಗಳಿಗೆ ಧ್ವಂಸ ಬೆಂಗಳೂರು ಹಿಂಸಾಚಾರ ಪ್ರಕರಣ: ಮಾಜಿ ಮೇಯರ್ ಆಪ್ತ, ಕಾರ್ಪೋರೇಟರ್ ಜಾಕೀರ್ ಬಂಧನ ಗ್ರಾಮ ಪಂಚಾಯಿತಿ ಚುನಾವಣೆ: ಶಸ್ತ್ರಾಸ್ತ್ರಗಳನ್ನು ಠೇವಣಿ  ಇಡಲು ಜಿಲ್ಲಾಧಿಕಾರಿ ಆದೇಶ  ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಹೆಸರಿನಲ್ಲಿ ನಕಲಿ ಫೇಸ್ ಬುಕ್… ಮಂಗಳೂರು ಏರ್ಪೋರ್ಟ್‌ಗೆ ಕೋಟಿ ಚೆನ್ನಯ ಹೆಸರಿಡುವಂತೆ ಆಗ್ರಹಿಸಿ ಡಿ.7ರಂದು ಬೈಕ್ ಜಾಥಾ ಮಂಗಳೂರು-ಬೆಂಗಳೂರು ವಯಾ ಶ್ರವಣಬೆಳಗೊಳ ರೈಲಿಗೆ ಮತ್ತೆ ಚಾಲನೆ ಪರ್ಷಿಯನ್ ಬೋಟ್ ಅವಘಡದಲ್ಲಿ ಸಾವನ್ನಪ್ಪಿದವರ ಶೋಕಾರ್ಥ ಮಂಗಳೂರು ಮೀನು ಮಾರುಕಟ್ಟೆ ಬಂದ್ ಕುಂಚ ಕಲಾವಿದರು ವೃತ್ತಿ ಕೌಶಲ್ಯ ಹೆಚ್ಚಿಸಿ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು

ಇತ್ತೀಚಿನ ಸುದ್ದಿ

ಅನ್ಯ ಜಾತಿಯ ಹುಡ್ಗಿಯಮದುವೆಯಾದ ಯುವಕನ ಕೊಲೆ: ಮತ್ತೊಂದು ಮರ್ಯಾದೆ ಹತ್ಯೆ

September 27, 2020, 3:31 PM

ಹೈದರಾಬಾದ್(reporterkarnataka news): ಹೈದರಾಬಾದ್ ನಲ್ಲಿ ಮತ್ತೊಮ್ಮೆ ಮರ್ಯಾದೆ ಹತ್ಯೆ ನಡೆದಿದೆ ಎಂದು ಆರೋಪಿಸಲಾಗಿದೆ. ಮಗಳು ಅನ್ಯ ಜಾತಿಗೆ ಸೇರಿದ ವರನನ್ನು ಮದುವೆಯಾಗಿದ್ದಕ್ಕೆ  ನವವಿವಾಹಿತ  ಹೇಮಂತ್ ಅವರನ್ನು ಅವರ ಮಾವನೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 

ಹೇಮಂತ್ ಮತ್ತು ಅವಂತಿ ಮದುವೆ ಜೂನ್ ನಲ್ಲಿ ನಡೆದಿತ್ತು. ಹೇಮಂತ್ ಪದವೀಧರರಾಗಿದ್ದು,

ಅವಂತಿ ಎಂಜಿನಿಯರಿಂಗ್ ಪದವಿ  ಶಿಕ್ಷಣ ಪಡೆದಿದ್ದರು. ಅವಂತಿ ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೇಮಂತ್  ಅವರದ್ದು ಬೇರೆ ಜಾತಿ. ಇದಕ್ಕಾಗಿ ಈ ಮದುವೆಯನ್ನು ಅವಂತಿ ತಂದೆ  ಯುಗಂಧರ್ ರೆಡ್ಡಿ ವಿರೋಧಿಸಿದ್ದರು ಎನ್ನಲಾಗಿದೆ.

ಹೈದರಾಬಾದಿನ ಚಂದಾನಗರದಲ್ಲಿ ವಾಸಿಸುತ್ತಿದ್ದ ಹೇಮಂತ್ ಅವರನ್ನು  ದುರುಳರ ತಂಡವೊಂದು ಕಾರಿನಲ್ಲಿ ಅಪಹರಿಸಿತ್ತು. ಮೂರು ದಿನಗಳ ಬಳಿಕ ಸಂಗಾರೆಡ್ಡಿಯಲ್ಲಿ ಹೇಮಂತ್ ಮೃತದೇಹ ಪತ್ತೆಯಾಗಿತ್ತು. ಕಾರಿನಲ್ಲಿಯೇ ಹೇಮಂತ್ ಅವರನ್ನು ಉಸಿರುಗಟ್ಟಿಸಿ ಹತ್ಯೆಮಾಡಲಾಗಿದೆ ಎಂದು ಆರೋಪಿಸಲಾಗಿದೆ.

 ಪ್ರಕರಣ ಸಂಬಂಧ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು