ಇತ್ತೀಚಿನ ಸುದ್ದಿ
ಅಂತಾರಾಜ್ಯ ಪ್ರಯಾಣಕ್ಕೆ ನಿರ್ಬಂಧ ಬೇಡ: ಕೇರಳ ಹೈಕೋರ್ಟ್ ಆದೇಶ
September 18, 2020, 12:38 PM

ಕೊಚ್ಚಿ(reporterkarnataka news): ಅಂತಾರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧ ವಿಧಿಸದಂತೆ ಕೇರಳ ಹೈಕೋರ್ಟ್ ಆದೇಶ ನೀಡಿದೆ. ಇದರಿಂದ ಕಾಸರಗೋಡು ಮತ್ತು ಮಂಗಳೂರು ಮಧ್ಯೆ ದಿನ ನಿತ್ಯ ಪ್ರಯಾಣಿಸುವ ಸಾವಿರಾರು ಮಂದಿಗೆ ಪ್ರಯೋಜನವಾಗಲಿದೆ.
ಈ ಹಿಂದೆ ಕೇಂದ್ರ ಗೃಹ ಸಚಿವಾಲಯ ಕೂಡ ಇದೇ ರೀತಿಯ ಆದೇಶ ನೀಡಿತ್ತು. ಆದರೆ ಅದನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಕ್ಕೆ ತರಲು ಕೇರಳ ಮುಂದಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಕಾಸರಗೋಡಿನ ಬಿಜೆಪಿ ಜಿಲಾಧ್ಯಕ್ಷ ಕೆ ಶ್ರೀಕಾಂತ್ ಈ ಸಂಬಂಧ ಸಾಮಾಜಿಕ ಜಾಲತಾಣಗಳುಮತ್ತು ಬಿಜೆಪಿ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆದಿದ್ದರು.