9:13 AM Wednesday20 - January 2021
ಬ್ರೇಕಿಂಗ್ ನ್ಯೂಸ್
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ…

ಇತ್ತೀಚಿನ ಸುದ್ದಿ

ಅಂದು ಟೈಗರ್ ಬಿಟ್ಟು ಅಟ್ಟಾಡಿಸಿ ಓಡಿಸಿದರು: ಇಂದು ರೆಡ್ ಕಾರ್ಪೆಟ್ ಹಾಸಿ ಸಾಲ ನೀಡಿದರು!!

December 1, 2020, 5:54 PM

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka@gmail.com

ಟೈಗರ್ ಕಾರ್ಯಾಚರಣೆ ನಿಮಗೆಲ್ಲ ಗೊತ್ತಿರಬಹುದು. ಇದು ಮಂಗಳೂರು ಮಹಾನಗರಪಾಲಿಕೆಯಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿಯು ಬೀದಿ ವ್ಯಾಪಾರಿಗಳ ವಿರುದ್ಧ ಆರಂಭಿಸಿದ ಕಾರ್ಯಾಚರಣೆ. ಪಾಲಿಕೆಯ ಕಂದಾಯ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಪೊಲೀಸರ ನೆರವಿನಿಂದ ನಿರಂತರವಾಗಿ ಈ  ಕಾರ್ಯಾಚರಣೆ ನಡೆಸಿದ್ದರು. ಬಡ ಬೀದಿ ವ್ಯಾಪಾರಿಗಳ ಅಟ್ಟಾಡಿಸಿ ಓಡಿಸಿದ್ದರು. 

ಟೈಗರ್ ಕಾರ್ಯಾಚರಣೆಗೆ ಪಾಲಿಕೆಯ ಅಂದಿನ ಕಮಿಷನರ್ ವಿಜಯ ಪ್ರಕಾಶ್ ಅವರು ಸಿಟಿ ಕಾರ್ಪೋರೇಷನ್ನಿನ  ಹಳೆಯ ಲಾರಿಗೆ ಹುಲಿ ಬಣ್ಣ ಹಾಕಿಸಿದ್ದರು. ಪಾಲಿಕೆ ಕಾರ್ಯಾಚರಣೆ ನಡೆಸಿದಾಗಲೆಲ್ಲ ಬೀದಿ ವ್ಯಾಪಾರಿಗಳು ತರಕಾರಿ, ಹಣ್ಣು-ಹಂಪಲು ಬಿಟ್ಟು ಓಡಿ ಹೋಗುತ್ತಿದ್ದರು. ಪಾಲಿಕೆ ಅಧಿಕಾರಿಗಳು ಆ ಸಾಮಗ್ರಿಗಳನ್ನೆಲ್ಲ ಟೈಗರ್ ಲಾರಿಯಲ್ಲಿ ತುಂಬಿಸಿ ಪಾಲಿಕೆ ಕಚೇರಿಯ ಹಿಂಭಾಗದಲ್ಲಿ ರಾಶಿ ಹಾಕುತ್ತಿದ್ದರು. 

ಇಂದು ಪರಿಸ್ಥಿತಿ ಬದಲಾಗಿದೆ. ಅಂದು ಪಾಲಿಕೆಯ ಅಧಿಕಾರಿಗಳಿಗೆ ಅಟ್ಟಾಡಿಸಿ ಓಡಿಸಲು ಹೇಳಿದವರು ಇಂದು ಅವರನ್ನು ಕರೆಸಿ ಸಾಲ ನೀಡಲು ಫರ್ಮಾನು ಹೊರಡಿಸಿದ್ದಾರೆ. ಪಾಲಿಕೆಯ ಅಧಿಕಾರಿಗಳು ಟಾರ್ಗೆಟ್ ರೀಚ್ ಆಗಲು ನಿದ್ರೆ ಬಿಟ್ಟು ಬೀದಿ ವ್ಯಾಪಾರಿಗಳ ಹುಡುಕುವ ಕೆಲಸ ಮಾಡಿದ್ದಾರೆ. 

ವಿಶೇಷವೆಂದರೆ ಅಂದು ಟೈಗರ್ ಕಾರ್ಯಾಚರಣೆ ನಡೆಸಿದ ಬಿಜೆಪಿ ಪಕ್ಷವೇ ಇಂದು ಮತ್ತೆ ಪಾಲಿಕೆಯಲ್ಲಿ ಅಧಿಕಾರದಲ್ಲಿದೆ. ಬಿಜೆಪಿ ಪಕ್ಷದ ಪ್ರಧಾನ ಮಂತ್ರಿಗಳೇ ಕೊರೊನಾದ ಹಿನ್ನೆಲೆಯಲ್ಲಿ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರುಸಾಲ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ಅಟ್ಟಾಡಿಸಿ ಓಡಿಸಿದ ಮಂದಿಯನ್ನು ಇಂದು ಹುಡುಕಿ ಹುಡುಕಿ ಟೌನ್ ಹಾಲ್ ಗೆ ಕರೆದು ತರಲಾಗಿದೆ.

ಮಂಗಳೂರಿನಲ್ಲಿ ಯಾವ ರೀತಿ ಲೆಕ್ಕ ಹಾಕಿದರೂ 600ಕ್ಕಿಂತ ಹೆಚ್ಚು ಬೀದಿ ವ್ಯಾಪಾರಿಗಳಿಲ್ಲ. ಆದರೆ ಪ್ರಧಾನಿ ಯೋಜನೆಯ ಪ್ರಕಾರ ಒಂದು ನಗರ/ ಪಟ್ಟಣದಲ್ಲಿ 5 ಸಾವಿರ ಮಂದಿಗೆ ಸಾಲ ನೀಡಲು ಅವಕಾಶವಿದೆ. ಇದರ ಪ್ರಕಾರ ಪಾಲಿಕೆ ಅಧಿಕಾರಿಗಳು ಅತ್ತು ಕರೆದು ಸಿಕ್ಕ ಸಿಕ್ಕವರಿಗೆ ಸಾಲದ ಅರ್ಜಿ ತುಂಬಿಸಿದ್ದಾರೆ. ಇದರ ಅಂಗವಾಗಿ ಸಾಲ ಉತ್ಸವ ಮಂಗಳವಾರ ನಗರದ ಪುರಭವನದಲ್ಲಿ ಅದ್ದೂರಿಯಾಗಿ ನಡೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು