11:08 PM Friday4 - December 2020
ಬ್ರೇಕಿಂಗ್ ನ್ಯೂಸ್
ಮತ್ತೆ ನರ್ತಿಸಲಿದೆ ಕದ್ರಿ ಸಂಗೀತ ಕಾರಂಜಿ: ಶನಿವಾರ,  ಭಾನುವಾರ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕದ್ರಿ –… ದಿಲ್ಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ  ಶ್ರೀನಿವಾಸಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಜಿ ಮೇಯರ್, ಕಾಂಗ್ರೆಸ್ ಹಿರಿಯ ನಾಯಕ, ಸಜ್ಜನ ರಾಜಕಾರಣಿ ಕೆ.ಕೆ. ಮೆಂಡನ್ ಇನ್ನಿಲ್ಲ ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ

ಇತ್ತೀಚಿನ ಸುದ್ದಿ

ಅಮೃತ ಸಂಜೀವಿನಿಯಿಂದ ಪುಟ್ಟ ಮಗು ಆರಾಧ್ಯಾಳ ಚಿಕಿತ್ಸೆಗೆ 17 ಲಕ್ಷ ರೂ. ನೆರವು ಹಸ್ತಾಂತರ

November 17, 2020, 4:36 PM

ಬೆಳ್ತಂಗಡಿ(reporterkarnataka news): ಅಮೃತ ಸಂಜೀವಿನಿ ಮಂಗಳೂರು ಇದರ 60ನೇ ಸೇವಾ ಯೋಜನೆಯ ಫಲಾನುಭವಿ ಪುಟ್ಟ ಕಂದಮ್ಮ ಆರಾಧ್ಯಳ ಚಿಕಿತ್ಸೆಗೆ ಸಂಗ್ರಹಿಸಿದ 17 ಲಕ್ಷ ರೂ.ವನ್ನು ಗುರುಪುರ ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಸ್ತಾಂತರಿಸಿದರು.

ಸಂಜೀವಿನಿ ಬೆಳ್ತಂಗಡಿಯ ಸಹಭಾಗಿತ್ವದಲ್ಲಿ ಉಜಿರೆಯ ಜನಾರ್ದನ ಸ್ವಾಮಿ ದೇವಾಲಯದ ವಠಾರದ ಶಾರದ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಾಯ ಧನ ಹಸ್ತಾಂತರಿಸುವ ಕಾರ್ಯ ನೆರವೇರಿತು.

ನಾವು ಇತರರಿಗೆ ನೆರವಾಗುವ ಕಾರ್ಯವು ಪುಣ್ಯದ ಕೆಲಸ. ಯುವಕರು ಒಗ್ಗೂಡಿ  ಅಮೃತ ಸಂಜೀವಿನಿ ಎಂಬ ಸಂಘಟನೆ

ಹುಟ್ಟು ಹಾಕಿ ಮಹಾನ್ ಕಾರ್ಯದಲ್ಲಿ ತೊಡಗಿರುವುದು ಇತರ ಸಂಘಟನೆಗಳಿಗೆ ಮಾದರಿ ಎಂದು ಗುರುಪುರ ಮಠದ ಸ್ವಾಮೀಜಿ ಈ ಸಂದರ್ಭ ಹೇಳಿದರು.

ಮೂರುವರೆ ವರ್ಷದ ಆರಾಧ್ಯಾ ಶ್ರವಣ ದೋಷದಿಂದಾಗಿ ಸಮಸ್ಯೆ ಎದುರಿಸುತ್ತಿದ್ದಳು. ಚಿಕಿತ್ಸೆಗೆ 14 ಲಕ್ಷ ರೂ. ವೆಚ್ಚವಾಗುವುದಾಗಿ ವೈದ್ಯರು ತಿಳಿಸಿದ್ದರು. ಅಮೃತ ಸಂಜೀವಿನಿ ತಂಡವು ತನ್ನ 60ನೇ ಕಾರ್ಯ ಯೋಜನೆಯಾಗಿ 17 ಲಕ್ಷ ರೂ.ಸಂಗ್ರಹಿಸಿ ನೀಡುವ ಮೂಲಕ ಮಾನವೀಯತೆ ಮೆರೆದಿದೆ.

ಅಮೃತ ಸಂಜೀವಿನಿ ಸದಸ್ಯ ವಸಂತ ಪಣಪಿಲ, ರಾಜೇಶ್ ಶೆಟ್ಟಿ, ರವಿಶಂಕರ್ ಕೋಟ್ಯಾನ್, ಪೂರ್ಣಿಮಾ, ಆನಂದ ಮುಂತಾದವರು ಉಪಸ್ಥಿತರಿದ್ದರು. ಲೋಕೇಶ್ ಶಿಬಾಜೆ ಸ್ವಾಗತಿಸಿದರು. ವಿಜೇತ್ ರೈ ಪುತ್ತೂರು ಕಾರ್ಯಕ್ರಮ ನಿರೂಪಿಸಿ, ಬಂಧಿಸಿದರು.

ನ.5ರಂದು ಮಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಗುವಿನ ಸಮಸ್ಯೆ ಆಲಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ವೈದ್ಯಕೀಯ ವೆಚ್ಚಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು