ಇತ್ತೀಚಿನ ಸುದ್ದಿ
ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಅಧಿಕೃತ ಘೋಷಣೆ
August 20, 2020, 6:48 AM

ವಾಷಿಂಗ್ಟ್ ನ್(reporterkarnatakanews): ಅಮೆರಿಕದ ಉಪಾಧ್ಯಕ್ಷ ಚುನಾವಣಾ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟ್ ಪಕ್ಷ ಅಧಿಕೃತವಾಗಿ ಸೂಚಿಸಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕಪ್ಪು ಜನಾಂಗಕ್ಕೆ ಸೇರಿದ ಮೊದಲ ಮಹಿಳೆ ಆಗಿದ್ದಾರೆ ಕಮಲಾ ಹ್ಯಾರಿಸ್.
ಉಪಾಧ್ಯಕ್ಷ ಸ್ಥಾನಕ್ಕೆ ಅಧಿಕೃತವಾಗಿ ಘೋಷಣೆಯಾದ ಕೂಡಲೇ ಪ್ರಚಾರ ಭಾಷಣ ಮಾಡಿದ ಕಮಲಾ ಹ್ಯಾರಿಸ್ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ದೊರೆಯಬೇಕು. ಅದುವೇ ದೇಶದ ನಿಜವಾದ ಸ್ವಾತಂತ್ರ್ಯ ಎಂದು ಹೇಳಿದರು. ಅಮೆರಿಕದ ಆರ್ಥಿಕತೆ ಅಥಪತನದತ್ತ ಹೊರಳಿದೆ. ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿ ಮತ್ತು ಸುಭದ್ರ ಅಮೆರಿಕ ನಿರ್ಮಾಣ ತಮ್ಮ ಗುರಿ ಎಂದು ಘೋಷಿಸಿದರು.
ನವೆಂಬರ್ 3ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದುವರೆಗಿನ ಸಮೀಕ್ಷೆ ಟ್ರಂಪ್ ಹಿನ್ನಡೆ ಸೂಚಿಸಿದೆ.