ಇತ್ತೀಚಿನ ಸುದ್ದಿ
ಆಕೃತಿ ಪ್ರಕಾಶನದ ಕಲ್ಲೂರು ನಾಗೇಶ್ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಮುದ್ರಣ ಸೊಗಸು’ ಪ್ರಶಸ್ತಿ ಪ್ರದಾನ
January 7, 2021, 12:18 PM

ಬೆಂಗಳೂರು(reporterkarnataka news):
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕನ್ನಡ ಪುಸ್ತಕ ಪ್ರಾಧಿಕಾರದ ೨೦೧೯ ನೇ ಸಾಲಿನ ಕನ್ನಡ ಪುಸ್ತಕ ಮುದ್ರಣ ಸೊಗಸು ಪ್ರಶಸ್ತಿಯನ್ನು ಆಕೃತಿ ಪ್ರಕಾಶನದ ಕಲ್ಲೂರು ನಾಗೇಶ್ ಅವರಿಗೆ ಪ್ರದಾನ ಮಾಡಲಾಯಿತು.
ಆರಂಭದಲ್ಲಿ ಸಣ್ಣ ಪುಸ್ತಕ ಪ್ರಕಾಶನ ಸಂಸ್ಥೆ ಹುಟ್ಟುಹಾಕಿ ಆಕೃತಿ ಪ್ರಕಾಶನದ ಮೂಲಕ ಇಂದು ನಾಗೇಶ್ ಅವರು ರಾಜ್ಯದಾದ್ಯಂತ ಪರಿಚಿತರಾಗಿದ್ದಾರೆ. ಆಕೃತಿ ಪ್ರಕಾಶನದ ವಿನ್ಯಾಸ ಹಾಗೂ ಮುದ್ರಣಾಮಟ್ಟವನ್ನು ಗಮನಿಸಿದ ಕರ್ನಾಟಕ ಸರಕಾರ “ಮುದ್ರಣ ಸೊಗಸು” ಪ್ರಶಸ್ತಿ ನೀಡಿ ಗೌರವಿಸಿದೆ.
ಸದಾ ಸಮಾಜಮುಖಿ ತುಡಿತ ಹೊಂದಿರುವ ನಾಗೇಶ್ ಅವರು ಮಹಾನ್ ರಕ್ತದಾನಿಯೂ ಹೌದು ಎನ್ನುವ ವಿಷಯ ಹೆಚ್ಚಿನವರಿಗೆ ಗೊತ್ತಿಲ್ಲ. ನಾಗೇಶ್ ಅವರು ತನ್ನನ್ನು ರೆಡ್ ಕ್ರಾಸ್ ಸಂಸ್ಥೆಯಲ್ಲಿ ತೊಡಗಿಸಿಕೊಂಡು ಅನೇಕ ರೋಗಿಗಳಿಗೆ ಆಪಾತ್ಬಾಂದವರಾಗಿದ್ದಾರೆ. ಹಾಗೆ ವೈಚಾರಿಕತೆ ಹಾಗೂ ಸೃಜನಶೀಲತೆ ನಾಗೇಶ್ ಇನ್ನೊಂದು ಹೆಸರು.