ಇತ್ತೀಚಿನ ಸುದ್ದಿ
ಅಕ್ರಮ ಗಣಿಗಾರಿಕೆ ಕೇಂದ್ರಕ್ಕೆ ತಹಶೀಲ್ದಾರ್ ರಶ್ಮಿ ನೇತೃತ್ವದ ತಂಡ ರಾತ್ರಿ ದಾಳಿ: ಲಕ್ಷಾಂತರ ಮೌಲ್ಯ ಸೊತ್ತು ವಶ
November 28, 2020, 8:43 AM

ಮಂಗಳೂರು(reporterkarnataka news): ಅಮ್ಟಾಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಕೆಂಪು ಕಲ್ಲುಗಾಣಿಗಾರಿಕೆಗೆ ಕೆಂಪು ಕಲ್ಲುಗಾಣಿಗಾರಿಕೆಗೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್. ನೇತೃತ್ವದ ತಂಡ ಶುಕ್ರವಾರ ರಾತ್ರಿ ದಾಳಿ ನಡೆಸಿ ದಾಳಿ ನಡೆಸಿ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದೆ.
ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರ ಸೂಚನೆ ಮೇರೆಗೆ ಅಮ್ಟಾಡಿಯ ಕೆಂಪುಗುಡ್ಡೆಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಕೇಂದ್ರಕ್ಕೆ ಕಂದಾಯ ಅಧಿಕಾರಿಗಳ ತಂಡ ದಾಳಿ ನಡೆಸಿತು. ಕಂದಾಯ ನಿರೀಕ್ಷಕ ನವೀನ್, ಗ್ರಾಮಕರಣಿಕ ಅಮೃತ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.