12:48 AM Wednesday21 - October 2020
ಬ್ರೇಕಿಂಗ್ ನ್ಯೂಸ್

ಇತ್ತೀಚಿನ ಸುದ್ದಿ

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ ಬಂಟ್ವಾಳ ತಾಲೂಕು ಸಭೆ

October 16, 2020, 8:53 PM

ಬಂಟ್ವಾಳ(reporterkarnataka news):

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ ಬಂಟ್ವಾಳ ತಾಲೂಕು ಸಭೆಯು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಬಂಟ್ವಾಳ ತಾಲೂಕು ಅಧ್ಯಕ್ಷರಾದ ವೇದಮೂರ್ತಿ ಶಿವರಾಮಯ್ಯ ಅಧ್ಯಕ್ಷತೆಯಲ್ಲಿ ಜರುಗಿತು. 

ಜಿಲ್ಲಾಧ್ಯಕ್ಷರಾದ ವೇದಮೂರ್ತಿ ಕೃಷ್ಣರಾಜ ಭಟ್, ಪೊಳಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕೆ. ಸೂರ್ಯನಾರಾಯಣ ಭಟ್, ಜಿಲ್ಲಾ ಸಮಿತಿಯ ಬರೆಪ್ಪಾಡಿ ಶಂಕರನಾರಾಯಣ ಭಟ್,  ಗುರಿಕಾರ ರಾದ ಮುಗುಳಿ ತಿರುಮಲೇಶ್ವರ ಭಟ್, ರಘುರಾಮ ತಂತ್ರಿ, ಗುರುರಾಜ ತಂತ್ರಿ, ಶ್ರೀನಿಧಿ ಮುಚ್ಚಿನ್ನಾಯ, ಎನ್. ಸುಬ್ರಹ್ಮಣ್ಯ ಭಟ್ ಮೊದಲಾದವರು ಭಾಗವಹಿಸಿದ್ದರು.

ನವರಾಜ ಭಟ್ ಸ್ವಾಗತಿಸಿದರು. ಎರುಂಬು ಶಂಕರನಾರಾಯಣಭಟ್  ವರದಿ ವಾಚಿಸಿದರು. ನಾರಾಯಣ ನಾವಡ ವಂದಿಸಿದರು.

ಮುಂದಿನ ಸಭೆಯನ್ನು ನವೆಂಬರ್ 25 ರಂದು ಬಿ.ಸಿ. ರೋಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಜರುಗಿಸಲು ತೀರ್ಮಾನಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು