6:36 PM Saturday28 - November 2020
ಬ್ರೇಕಿಂಗ್ ನ್ಯೂಸ್
ಬಿ.ಸಿ.ರೋಡ್ ನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟನೆಯಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಬಜಾಲ್ ಆದರ್ಶನಗರದ ಹದಗೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ಕೊಂಚಾಡಿ ಕಾಶೀ ಮಠದಲ್ಲಿ ತುಳಸಿ ಪೂಜೆ: ಪಂಚಾಮೃತ, ಕ್ಷೀರಾಭಿಷೇಕ ಸಂಪನ್ನ ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಜಾಮೀನು ಕೋರಿ ಹೈಕೋರ್ಟ್ ಗೆ ಮತ್ತೆ ಅರ್ಜಿ ಸಲ್ಲಿಸಿದ ಸ್ಯಾಂಡಲ್ ವುಡ್ ನಟಿ… ಹೈದರಾಬಾದ್ ತಲುಪಿದ ಪ್ರಧಾನಿ ಮೋದಿ: ಬಯೋಟೆಕೆ ಸಂಸ್ಥೆಗೆ ಭೇಟಿ, ವಿಜ್ಞಾನಿಗಳ ಜತೆ ಸಮಾಲೋಚನೆ  ಕಲ್ಲಿದ್ದಲು ಮಾಫಿಯಾ: ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಸಿಬಿಐ ದಾಳಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 86 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶ ಕಂದಾಯ ಸಚಿವ ಆರ್. ಅಶೋಕ್ ದೆಹಲಿಯಲ್ಲಿ ರೈಲ್ವೆ ಸಚಿವರ ಭೇಟಿ  ಕೊರೊನಾ ಲಸಿಕೆ ಅಭಿವೃದ್ಧಿ: ಇಂದು ಸಂಶೋಧನಾ ಸಂಸ್ಥೆಗಳಿಗೆ ಪ್ರಧಾನಿ ಮೋದಿ ಭೇಟಿ

ಇತ್ತೀಚಿನ ಸುದ್ದಿ

ನವೆಂಬರ್ 26ರ ಅಖಿಲ ಭಾರತ ಮುಷ್ಕರದ ಯಶಸ್ವಿಗೆ ಜಿಲ್ಲಾಮಟ್ಟದ ಕಾರ್ಮಿಕರ ಸಮಾವೇಶ

November 13, 2020, 11:26 PM


ಮಂಗಳೂರು(reporterkarnataka news):

ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ- ಕಾರ್ಮಿಕ- ಜನ ವಿರೋಧಿ ನೀತಿಗಳ ವಿರುದ್ದ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನವೆಂಬರ್ 26ರಂದು 

ನಡೆಯಲಿರುವ ಅಖಿಲ ಭಾರತ ಮಹಾ ಮುಷ್ಕರದ

ಯಶಸ್ವಿಗಾಗಿ ನಗರದಲ್ಲಿ ಶನಿವಾರ ದ.ಕ.ಜಿಲ್ಲಾ ಮಟ್ಟದ ಕಾರ್ಮಿಕರ ಸಮಾವೇಶ ನಡೆಯಿತು.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಒಳ್ಳೆಯ ದಿನಗಳು ಬರಲಿದೆ ಎಂದು ಜನತೆಗೆ ಮಂಕುಬೂದಿ ಎರಚಿ ದೇಶದ ಅಧಿಕಾರದ ಗದ್ದುಗೆಯೇರಿದ ನರೇಂದ್ರ ಮೋದಿ ಸರಕಾರವು ಹೆಜ್ಜೆಹೆಜ್ಜೆಗೂ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶವನ್ನೇ ಮಾರಲು ಹೊರಟಿದೆ. ರೈತರ ಭೂಮಿ ಮತ್ತೆ ಬಹುರಾಷ್ಟ್ರೀಯ ಕಂಪೆನಿಗಳ ತೆಕ್ಕೆಗೆ ಹೋಗುವಂತಾಗಲು ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಲಾಗುತ್ತಿದೆ. ಕಾರ್ಮಿಕ ವರ್ಗದ ಶಕ್ತಿಯನ್ನು ಕ್ಷೀಣಿಸಲು ಆಕ್ರಮಣಕಾರಿ ನೀತಿಗಳನ್ನು ಜಾರಿಗೊಳಿಸಿ ಕಾರ್ಮಿಕರು ಸಂಘಟಿತರಾಗದಂತೆ ಆಳುವ ವರ್ಗಗಳು ಪಿತೂರಿ ನಡೆಸುತ್ತಿದೆ. ಇವೆಲ್ಲದರ ವಿರುದ್ದ ಕಾರ್ಮಿಕ ವರ್ಗ ಸೆಟೆದೆದ್ದು ಸಮರಶೀಲ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ಎಐಟಿಯುಸಿ ಜಿಲ್ಲಾ ನಾಯಕರಾದ ಸೀತಾರಾಮ ಬೇರಿಂಜ ಮಾತನಾಡಿ, ಮಾತೆತ್ತಿದ್ದರೆ ದೇಶಪ್ರೇಮದ ಬಗ್ಗೆ ಮಾತನಾಡುವವರು, ಜನರ ಭಾವನೆಗಳನ್ನು ಕೆರಳಿಸಿ ಜಾತಿ ಧರ್ಮದ ಹೆಸರಿನಲ್ಲಿ ಕಪಟ ರಾಜಕೀಯ ನಡೆಸಿ ದೇಶವನ್ನೇ ಅಧಾನಿ ಅಂಬಾನಿಗಳ ಕೈಗೊಪ್ಪಿಸಲು ಖಾಸಗೀಕರಣದ ಮಂತ್ರ ಜಪಿಸುತ್ತಿದ್ದಾರೆ ಎಂದು ಹೇಳಿದರು.

ಬ್ಯಾಂಕ್ ನೌಕರರ ರಾಷ್ಟ್ರೀಯ ನಾಯಕರಾದ ವಿನ್ಸೆಂಟ್ ಡಿಸೋಜ, ವಿಮಾ ನೌಕರರ ಜಿಲ್ಲಾ ಮುಖಂಡರಾದ ರಾಘವೇಂದ್ರ ರಾವ್, ಸಾರಿಗೆ ನೌಕರರ ರಾಜ್ಯ ಮುಖಂಡರಾದ ಪ್ರವೀಣ್ ಕುಮಾರ್ ಮುಂತಾದವರು ಮಾತನಾಡಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಎಐಟಿಯುಸಿ

ಜಿಲ್ಲಾಧ್ಯಕ್ಷ ಬಿ.ಶೇಖರ್, ಎಐಸಿಸಿಟಿಯು ಜಿಲ್ಲಾ ನಾಯಕರಾದ ಸತೀಶ್ ಕುಮಾರ್ ಅವರನ್ನೊಳಗೊಂಡ ಅಧ್ಯಕ್ಷೀಯ ಮಂಡಳಿ ಸಮಾವೇಶ ನಡೆಸಿ ಕೊಟ್ಟಿತು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾವ್  ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ವಂದಿದರು.

ಇತ್ತೀಚಿನ ಸುದ್ದಿ

ಜಾಹೀರಾತು