ಇತ್ತೀಚಿನ ಸುದ್ದಿ
ಏರ್ ಪೋರ್ಟ್ ನಲ್ಲಿ ಮುಖಾಮುಖಿಯಾದ ಹಾಲಿ- ಮಾಜಿ ಸಿಎಂ: ಶೇಕ್ ಹ್ಯಾಂಡ್ ಬೇಡವೆಂದ ಬಿಎಸ್ ವೈ
December 6, 2020, 2:43 PM

ಬೆಂಗಳೂರು(Reporter Karnataka News)
ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯಕಾರಿಣಿ ಸಭೆ ಮುಗಿಸಿ ಬೆಂಗಳೂರಿನತ್ತ ಹೊರಟ ಸಿಎಂ ಯಡಿಯೂರಪ್ಪನವರಿಗೆ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕರು ಮುಖಾಮುಖಿಯಾಗಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾದ ಹಾಲಿ ಸಿಎಂ , ಮಾಜಿ ಸಿಎಂ ಪರಸ್ಪರ ಆತ್ಮೀಯವಾಗಿ ಭೇಟಿಯಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಎದುರಾದ ಸಿಎಂಗೆ ಸಿದ್ದರಾಮಯ್ಯ ಶೇಕ್ ಹ್ಯಾಂಡ್ ನೀಡಲು ಮುಂದಾಗಿದ್ದಾರೆ. ಸಿಎಂ ಬೇಡ ಇದು ಕೊರೊನಾ ಟೈಮ್ ಎಂದು ಕೈ ಮುಗಿದಿದ್ದಾರೆ. ಇಬ್ಬರು ನಾಯಕರು ಕೆಲಕಾಲ ಹರಟು , ನಕ್ಕು , ತಮಾಷೆ ಮಾಡಿದ್ದಾರೆ.