ಇತ್ತೀಚಿನ ಸುದ್ದಿ
ಕೇರಳದ ಕರಿಪುರಂ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ: ಇಬ್ಬರು ಪೈಲಟ್ ಸೇರಿ ಹಲವರ ಸಾವು
August 7, 2020, 3:49 PM

ಕಾಸರಗೋಡು ( ರಿಪೋರ್ಟರ್ ಕರ್ನಾಟಕ)
ಕೇರಳದ ಕೊಯಿಕೋಡ್ ಸಮೀಪದ ಕರಿಪುರಂ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಏಕ್ಸ್ ಪ್ರೆಸ್ ವಿಮಾನ ಅಪಘಾತಕ್ಕೀಡಾದ ಪರಿಣಾಮ ಇಬ್ಬರು ಪೈಲಟ್ ಸಹಿತ 16 ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ.
ವಿಮಾನ ರನ್ ವೇ ಬಿಟ್ಟು ಮುಂದಕ್ಕೆ ಚಲಿಸಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ವಿಮಾನ ಎರಡು ತುಂಡಾಗಿದೆ. ಸಂಜೆ 7.45ರ ಹೊತ್ತಿಗೆ ಈ ದುರಂತ ಸಂಭವಿಸಿದೆ. ಪೈಲಟ್ ಸಾಥೆ ಎಂಬವರು ಮೃತಪಟ್ಟಿದ್ದಾರೆ. ಸಹ ಪೈಲಟ್ ಅಖಿಲೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ
6 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 191 ಮಂದಿ ವಿಮಾನದಲ್ಲಿದ್ದರು ಎಂಬ ಮಾಹಿತಿ ಇದೆ. 24 ಆ್ಯಂಬುಲೆನ್ಸ್ ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ವಿಮಾನದ ಅವಶೇಷದ ಅಡಿಯಲ್ಲಿ ಮಗುವೊಂದು ಸಿಲುಕಿರುವ ಶಂಕೆ ಇದ್ದು ರಕ್ಷಣೆ ಕಾರ್ಯ ನಡೆಯುತ್ತಿದೆ.
ಪ್ರಸ್ತುತ ಕೋಯಿಕ್ಕೋಡಿನಲ್ಲಿ ಭಾರಿ ಮಳೆಯಾಗುತ್ತಿದ್ದು. ಮೂಲಗಳ ಪ್ರಕಾರ, ಕರಿಪುರ ವಿಮಾನ ನಿಲ್ದಾಣದಲ್ಲಿ ಹವಾಮಾನ ಕೆಟ್ಟದಾಗಿದ್ದರೆ ವಿಮಾನಗಳು ಸಾಮಾನ್ಯವಾಗಿ ಹತ್ತಿರದ ವಿಮಾನ ನಿಲ್ದಾಣಗಳಿಗೆ ತಿರುಗಿಸಲ್ಪಡುತ್ತವೆ, ಏಕೆಂದರೆ ಇದು ಟೇಬಲ್ಟಾಪ್ ವಿಮಾನ ನಿಲ್ದಾಣವಾಗಿದೆ. ಆದರೆ, ಇದನ್ನು ಶುಕ್ರವಾರ ಮಾಡಿರಲಿಲ್ಲ.