ಇತ್ತೀಚಿನ ಸುದ್ದಿ
ಕೆಂಜಾರು-ಅದ್ಯಪಾಡಿ ರಸ್ತೆ ಮೇಲೆ ಗುಡ್ಡ ಕುಸಿತ, ಸಂಚಾರ ಸ್ಥಗಿತ, ಬಿಡಬ್ಲ್ಯುಡಿ ಅಧಿಕಾರಿಗಳ ಭೇಟಿ
September 20, 2020, 12:27 PM

ಬಜಪೆ(reporter Karnataka News)
ಮಂಗಳೂರು ವಿಮಾನ ನಿಲ್ದಾಣ ನಿರ್ಗಮನ ರಸ್ತೆಯ ಪಕ್ಕದ ಕೆಂಜಾರು, ಅದ್ಯಪಾಡಿ ರಸ್ತೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿದು ಬಿದ್ದಿದ್ದು ಸಂಚಾರ ಸ್ಥಗಿತಗೊಂಡಿದೆ.
ರಸ್ತೆಯ ಬದಿಯ ಗುಡ್ಡ ಪ್ರದೇಶದಿಂದ ದೊಡ್ಡ ಬಂಡೆಯೂ ರಸ್ತೆಯ ಮೇಲೆ ಬಿದ್ದಿದ್ದು ಶನಿವಾರ ರಾತ್ರಿ ಈ ಘಟನೆ ನಡೆದಿರುವುದರಿಂದ ಸಂಚಾರ ಇಲ್ಲದೇ ಇರುವ ಸಂದರ್ಭ ಜಾರಿ ಬಿದ್ದಿರುವ ಪರಿಣಾಮ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ
ಕಳೆದ ವರ್ಷ ಕೂಡ ಮತ್ತೊಂದು ಭಾಗದಲ್ಲಿ ಇದೇ ರೀತಿ ಗುಡ್ಡ ಕುಸಿದ್ದಿದ್ದು ಅಲ್ಲಿ ಕಾಂಕ್ರೀಟ್ ತಡೆಗೋಡೆಯನ್ನು ನಿರ್ಮಿಸಲಾಗಿತ್ತು.
ಈ ರಸ್ತೆಯ ಇನ್ನೂ ಅನೇಕ ಭಾಗಗಳಲ್ಲಿ ಮರಗಳು ಬಾಗಿ ನಿಂತಿರುವ ಸ್ಥಿತಿಯಲ್ಲಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಕೆಂಜಾರು ಅದ್ಯಪಾಡಿ ರಸ್ತೆಗೆ ಪಿಡಬ್ಲುಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಸೋಮವಾರ ಬೆಳಿಗ್ಗೆ ರಸ್ತೆ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.