ಇತ್ತೀಚಿನ ಸುದ್ದಿ
ಅಡ್ಡ ಪರಿಣಾಮದ ಪತ್ತೆ: ಭಾರತದಲ್ಲಿ ಆಕ್ಸ್ ಫರ್ಡ್ ಕೊರೊನಾ ಲಸಿಕೆ ಪ್ರಯೋಗಕ್ಕೆ ತಡೆ
September 10, 2020, 2:27 AM

ನವದೆಹಲಿ(reporterkarnataka news): ಬ್ರಿಟನ್ ಬಳಿಕ ಭಾರತದಲ್ಲಿ ಕೂಡ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸುತ್ತಿರುವ ಕೊರೊನಾ ಲಸಿಕೆ ಪರೀಕ್ಷೆ ಮೇಲೆ ನಿರ್ಬಂಧ ವಿಧಿಸಲಾಗಿದೆ. ಅಡ್ಡ ಪರಿಣಾಮ ಕಂಡು ಬಂದಿರುವ ಹಿನ್ನೆಲೆಯಲ್ಲಿ ಬ್ರಿಟನ್ ನಲ್ಲಿ ಇದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ಈ ಸಂಬಂಧ ದೇಶದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಪುಣೆಯ ಸಿರಾಂ ಸಂಸ್ಥೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಜತೆ ಕೈ ಜೋಡಿಸಿ ಭಾರತದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಕೊರೋನಾ ತಡೆ ಲಸಿಕೆ ನೀಡಿದ ವ್ಯಕ್ತಿಯೊಬ್ಬರಲ್ಲಿ ಅಡ್ಡ ಪರಿಣಾಮ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಆಕ್ಸ್ ಫರ್ಡ್ ತಾತ್ಕಾಲಿಕವಾಗಿ ತಡೆಹಿಡಿದಿದೆ.