ಇತ್ತೀಚಿನ ಸುದ್ದಿ
ಅಬ್ಬಾ… !! ಮಂಗಳೂರಿಗೆ ಬಂತು ಕೋವಿಸೀಲ್ಡ್ ಲಸಿಕೆ: ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಭದ್ರ
January 14, 2021, 12:38 PM

ಮಂಗಳೂರು(reporterkarnataka news): ದಕ್ಷಿಣ ಕನ್ನಡ ಜಿಲ್ಲೆಗೆ ಕೋವಿಡ್ 19 ಹಿಮ್ಮೆಟ್ಟಿಸುವ ಲಸಿಕೆ ಕೊನೆಗೂ ಬಂದಿದೆ. ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲೆಗೆ ಗುರುವಾರ ಆಗಮಿಸಿದ ಕೋವಿಸೀಲ್ಡ್ ಲಸಿಕೆಯನ್ನು ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಬೆಳಿಗ್ಗೆ ವೆನ್ಲಾಕ್ ಆವರಣದಲ್ಲಿ ಸ್ವಾಗತಿಸಿ, ಬರ ಮಾಡಿಕೊಳ್ಳಲಾಯಿತು.
ಜಿಲ್ಲೆಗೆ 24500 ಕೊವೀಡ್-19 ರ ಕೋವಿಸೀಲ್ಡ್ ಲಸಿಕೆಯು ಮೈಸೂರುನಿಂದ ಆಗಮಿಸಿದ್ದು,ರಾಜ್ಯ ಸರ್ಕಾರದಿಂದ ಹೊಸದಾಗಿ ನೀಡಿರುವ ಐ.ಎಲ್.ಆರ್ ಲಸಿಕಾ ಸಂಗ್ರಹಣದ ಕೋಲ್ಡ್ ಸ್ಟೋರೆಜ್ದಲ್ಲಿ ಲಸಿಕೆಯನ್ನು ಸಂಗ್ರಹಿಸಿ ಇಡಲಾಗಿದೆ.
ಜನವರಿ 16 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಾದ್ಯಂತ ಲಸಿಕಾಕರಣಕ್ಕೆ , ಆನ್ಲೈನ್ ಮೂಲಕ ಚಾಲನೆ ನೀಡಲಿದ್ದಾರೆ.
ಇದನ್ನು ಎಲ್ಲ ಸರಕಾರಿ ಆಸ್ಪತ್ರೆಗಳ ನೊಂದಾಯಿತ ಆರೋಗ್ಯ ಸಿಬ್ಬಂದಿಗೆ ಮುಂದಿನ ದಿನಗಳಲ್ಲಿ ಹಂಚಿಕೆಯಾಗಿ ಬರುವ ಲಸಿಕೆಯನ್ನು ಉಳಿದ ನೊಂದಾಯಿತ ಆರೋಗ್ಯ ಸಿಬ್ಬಂದಿ ಹಾಗೂ ಕೊರೋನಾ ವಾರಿಯರ್ ಗೆ ನೀಡಲಾಗುತ್ತದೆ .