ಇತ್ತೀಚಿನ ಸುದ್ದಿ
794 ವರ್ಷದ ಬಳಿಕ ಅಪರೂಪದ ವಿದ್ಯಮಾನ; ದಿಗಂತದಲ್ಲಿ ಗುರು – ಶನಿಗಳು ಸಮಾಗಮ !!
December 7, 2020, 9:04 PM

ಮಂಗಳೂರು(reporterkarnataka news):
ಕತ್ತಲೆಯಾದ ಬಳಿಕ ಪಶ್ಚಿಮ ದಿಗಂತದತ್ತ ಒಮ್ಮೆ ಕಣ್ಣೆತ್ತಿ ನೋಡಿದರೆ ಸೌರವ್ಯೂಹದ ಎರಡು ಬೃಹತ್ ಗ್ರಹಗಳಾದ ಗುರು ಮತ್ತು ಶನಿ ಬಹಳ ಸಮೀಪವಿದ್ದಂತೆ ಈ ತಿಂಗಳು ಕಾಣುತ್ತಿವೆ. ಈ ಗ್ರಹಗಳ ಜೋಡಿ, ಶ್ರವಣ ನಕ್ಷತ್ರದ ಪಕ್ಕದಲ್ಲಿ ನಮ್ಮನ್ನೆಲ್ಲ ಆಕರ್ಷಿಸುತ್ತವೆ. ಸುಮಾರು 794 ವರ್ಷದ ಬಳಿಕ ಈ ಅಪರೂಪದ ವಿದ್ಯಮಾನ ದಿಗಂತದಲ್ಲಿ ಸಂಭವಿಸುತ್ತಿದೆ.
ಗುರು ಗ್ರಹಕ್ಕೆ ಸೂರ್ಯನನ್ನೊಮ್ಮೆ ಸುತ್ತಲು 12 ವರ್ಷ ಬೇಕಾದರೆ, ಶನಿಗ್ರಹಕ್ಕೆ ಸುಮಾರು 30 ವರ್ಷಗಳು ಬೇಕಾಗುತ್ತದೆ.
ಪ್ರತೀ 20 ವರ್ಷಕ್ಕೊಮ್ಮೆ ಈ ಎರಡು ಗ್ರಹಗಳು ಸಮೀಪದಲ್ಲಿ ಕಾಣುತ್ತವೆಯಾದರೂ ಈ ಸಲ ಭಾರೀ ಸಮೀಪದಲ್ಲಿ ಗೋಚರಿಸಲಿದೆ. ಈ ತಿಂಗಳ ಪ್ರತೀದಿನ ಉಭಯ ಗ್ರಹಗಳು ಹತ್ತಿರ ಹತ್ತಿರ ಬಂದು, ಡಿಸೆಂಬರ್ 21ರಂದು ಕನಿಷ್ಠ ಅಂತರ, ಬರೇ 6 ನಿಮಿಷದ ಅಂತರದಲ್ಲಿ (0.1 ಡಿಗ್ರಿ) ಬರಲಿವೆ.
ಇಷ್ಟು ಹತ್ತಿರ ಈ ಮೊದಲು 1226, ಮಾರ್ಚ್ 4ರಂದು ಈ ಹಿಂದೆ ಬಂದಿತ್ತು. ಮುಂದೆ ಹೀಗೆ 2080 ಮತ್ತೆ, 2400ರಲ್ಲಿ ಈ ಸಮೀಪ ಈ ಗ್ರಹಗಳು ಕಾಣಲಿವೆ. ಇದೊಂದು ಅಪರೂಪದ ಆಕಾಶದ ವಿದ್ಯಮಾನ. ನಿಜವಾಗಿ ಗುರು ಗ್ರಹ ಭೂಮಿಯಿಂದ ಈಗ, ಸುಮಾರು 89 ಕೋಟಿ ಕಿಮೀ ದೂರದಲ್ಲಿದೆಯಾದರೆ, ಶನಿ ಗ್ರಹ ಗುರು ಗ್ರಹರಿಂದ ಅಷ್ಟೇ ಆಳದಲ್ಲಿ, ಅಂದ್ರೆ ಭೂಮಿಯಿಂದ ಸುಮಾರು 159 ಕೋಟಿ ಕಿಮೀ ದೂರದಲ್ಲಿ