5:55 AM Saturday23 - January 2021
ಬ್ರೇಕಿಂಗ್ ನ್ಯೂಸ್
ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು ಮಂಗಳೂರಿನಲ್ಲಿ  ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ 5ನೇ ಪುಣ್ಯತಿಥಿ ಆಚರಣೆ ಮಡಿಕೇರಿ ತಾಲೂಕು ಅಕ್ರಮ- ಸಕ್ರಮ ಸಮಿತಿ ಸಭೆಯಲ್ಲಿ ಹಲವು ಅರ್ಜಿಗಳ ವಿಲೇವಾರಿ  … ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಸಿಕ್ಕಿತು ಜಾಮೀನು: 140 ದಿನಗಳ ಬಳಿಕ ಬಿಡುಗಡೆ…

ಇತ್ತೀಚಿನ ಸುದ್ದಿ

7ನೇ ಕ್ಲಾಸ್ ಸುಲ್ತಾನ್ ಟಿಪ್ಪು ಪಾಠ ಕ್ಯಾನ್ಸಲ್ !?

July 28, 2020, 7:16 AM

ಬೆಂಗಳೂರು(reporterkarnataka News)

ಜಗತ್ತಿನೆಲ್ಲೆಡೆ ವ್ಯಾಪಕವಾಗಿ ಹರಡಿದ ಕೊರೊನಾ ವೈರಸ್ ಕೋವಿಡ್ 19 ಸೋಂಕು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು ಮಾತ್ರವಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ಕಳೆದ ಮೂರು ತಿಂಗಳಿಂದ ಶಾಲಾ ಕಾಲೇಜ್‌ಗಳು ಬಂದ್ ಆಗಿದ್ದು ಕೊರೋನಾ ಸಂಕಷ್ಟದ ನಡುವೆಯೆ ಪರೀಕ್ಷೆಗಳು ನಡೆಯಿತಾದರೂ ತರಗತಿ ಆರಂಭಿಸುವುದು ಸುಲಭ ಸಾಧ್ಯವಲ್ಲ.

ಪುನಾರಾರಂಭ ಇನ್ನೂ ಅನಿಶ್ಚಿತತೆಯಿಂದ ಕೂಡಿದ್ದು, ಇದರ ಮಧ್ಯೆ ಶೈಕ್ಷಣಿಕ ಅವಧಿಯನ್ನು ಕಡಿತಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಶೇಕಡಾ 30ರಷ್ಟು ಪಠ್ಯವನ್ನು ಕಡಿತ ಮಾಡಲಾಗುತ್ತಿದ್ದು, ಇದರಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಕುರಿತ ಪಠ್ಯವನ್ನು ಏಳನೇ ತರಗತಿ ಪುಸ್ತಕದಿಂದ ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ. 6 ಮತ್ತು 10ನೇ ತರಗತಿಯಲ್ಲಿ ಈ ಪಠ್ಯವನ್ನು ಮುಂದುವರೆಸಲಾಗಿದೆ.

ಪುಸ್ತಕಗಳಲ್ಲಿ ಟಿಪ್ಪು ಪಠ್ಯವನ್ನು ಕೈಬಿಡಬೇಕೆಂದು ಈ ಹಿಂದೆ ಒತ್ತಾಯ ಕೇಳಿಬಂದಿದ್ದು, ಹೀಗಾಗಿ ಸರ್ಕಾರ ಪರಿಶೀಲನೆಗೆಂದು ಸಮಿತಿ ರಚನೆ ಮಾಡಿತ್ತು. ಆದರೆ ಈ ಸಮಿತಿ ಟಿಪ್ಪು ಪಠ್ಯವನ್ನು ಉಳಿಸಿಕೊಳ್ಳುವುದು ಸೂಕ್ತ ಎಂದು ಹೇಳಿದ್ದ ಕಾರಣ ಸರ್ಕಾರಕ್ಕೆ ಒಪ್ಪಿಗೆ ನೀಡಿತ್ತು.
ಇದೀಗ ಪಠ್ಯ ಕಡಿತ ಮಾಡುವ ವೇಳೆ ಟಿಪ್ಪು ಪಠ್ಯವನ್ನು 7ನೇ ತರಗತಿ ಪುಸ್ತಕದಿಂದ ಕೈಬಿಡಲಾಗಿದೆ. ಪಠ್ಯ ಪುಸ್ತಕದಲ್ಲಿನ ಶೇಕಡಾ 30 ರಷ್ಟು ಪಠ್ಯವನ್ನು ಕೈ ಬಿಡಲಾಗಿದ್ದು, ಇದರಲ್ಲಿ ಟಿಪ್ಪು ಪಠ್ಯ ಕೂಡ ಸೇರಿದೆ. ಆದರೆ ಯಾವಾಗ ಶಾಲೆ ಆರಂಭವಾಗಯತ್ತದೆ ಎಂದು ಇಲಾಖೆಗೂ ಗೊತ್ತಿಲ್ಲವಂತೆ !

ಇತ್ತೀಚಿನ ಸುದ್ದಿ

ಜಾಹೀರಾತು