ಇತ್ತೀಚಿನ ಸುದ್ದಿ
2020ರ ಐಪಿಎಲ್ಗೆ 222 ಕೋಟಿ ಬಿಡ್ ಮಾಡಿ ಟೈಟಲ್ ಸ್ಪಾನ್ಸರ್ ಆದ ಡ್ರೀಮ್ 11
August 18, 2020, 1:45 PM

ಮುಂಬೈ(Reporter Karnataka News)
ಫ್ಯಾಂಟಸಿ ಸ್ಪೋರ್ಟ್ಸ್ ಲೀಗ್ ಡ್ರೀಮ್ ಇಲೆವೆನ್ ಕಂಪೆನಿ ಈ ಬಾರಿ ಯುಎಇಯಲ್ಲಿ ನಡೆಯುವ ಐಪಿಎಲ್-2020 ಟೈಟಲ್ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ.
ಸುಮಾರು 222 ಕೋಟಿ ರೂ.ಗೆ ಡ್ರೀಮ್ ಇಲೆವೆನ್ ಈ ಹಕ್ಕು ಪಡೆದುಕೊಂಡಿದೆ.
ಅತ್ತ ಬಿಡ್ನಲ್ಲಿ ಟಾಟಾ ಗ್ರೂಪ್, ಬೆಂಗಳೂರು ಮೂಲದ ಕಂಪೆನಿಗಳಾದ ಬೈಜೂಸ್ ಹಾಗೂ ಅನ್ಅಕಾಡೆಮಿ ಕೂಡ ಭಾಗಿಯಾಗಿತ್ತು. ಈ ಪೈಕಿ ಅನ್ಅಕಾಡೆಮಿ 210 ರೂ.ಗಳ ಬಿಡ್ ಮಾಡಿದ್ದರೆ ಟಾಟಾ 180 ಕೋಟಿ ರೂ. ಹಾಗೂ ಬೈಜೂಸ್ 125 ಕೋಟಿ ರೂ.ಗಳ ಬಿಡ್ ಮಾಡಿತ್ತು. ಆದರೆ 222 ಕೋಟಿ ರೂ.ಗಳ ಬಿಡ್ ಮಾಡಿದ್ದ ಡ್ರೀಮ್ ಇಲೆವೆನ್ ಈ ಬಾರಿಯ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡಿದೆ.
2018ರಲ್ಲೇ ಚೀನಾ ದೇಶದ ಮೊಬೈಲ್ ಕಂಪೆನಿ ವಿವೊ, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವವನ್ನು 5 ವರ್ಷದ ಅವಧಿಗೆ ತೆಗೆದುಕೊಂಡಿತ್ತು. ಆದರೆ ವಿವೊ ಐಪಿಎಲ್ ನಡೆಸುವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ಕೇಳಿ ಬಂದಿತ್ತು. ಗಡಿ ಗಲಾಟೆಯ ನಂತರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿವೊ ಕಂಪೆನಿಯನ್ನು ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದಿಂದ ಕೈಬಿಟ್ಟಿತ್ತು. ನಂತರ ಇಂಡಿಯಾದ ಕಂಪೆನಿಗಳಿಗೆ ಪ್ರಾಯೋಜಕತ್ವವನ್ನು ಕೊಂಡುಕೊಳ್ಳಲು ಅವಕಾಶ ನೀಡಿಲಾಗಿತ್ತು. ಈಗ ಇಂಡಿಯಾದ ಡ್ರೀಮ್ 11 ಕಂಪೆನಿಯ ಈ ಪ್ರಾಯೋಜಕತ್ವವನ್ನು ಬರೋಬ್ಬರಿ 222 ಕೋಟಿ ನೀಡಿ ಕೊಂಡುಕೊಂಡಿದೆ. ಎಂದು ಬಿಸಿಸಿಐ ನಿನ್ನೆ ತಿಳಿಸಿದೆ. ವಿವೊ ಬಿಸಿಸಿಐಗೆ ಈ ಹಿಂದೆ 440 ಕೋಟಿ ರೂ. ನೀಡಿತ್ತು. ಇಂಡಿಯಾ ಕಂಪೆನಿಯೊಂದಕ್ಕೆ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಸಿಗಲಿದೆ ಎಂಬ ಮಾಹಿತಿ ಹೊರಬಂದ ನಂತರ, ಜಿಯೋ ಮತ್ತು ಪತಂಜಲಿ ಕಂಪೆನಿಗಳ ಹೆಸರು ಸಾಮಾಜಿಕ ಜಾಲತಾಣದಲ್ಲಿ ಮುನ್ನೆಲೆಗೆ ಬಂದಿದ್ದವು. ಆದರೆ ಕೊನೆಯಾದಾಗಿ ಬೆಂಗಳೂರಿನ ಬೈಜೂಸ್ ಮತ್ತು ಡ್ರೀಮ್ 11 ಕಂಪೆನಿಗಳ ನಡುವೆ ಟೈಟಲ್ ಪ್ರಾಯೋಜಕತ್ವಕ್ಕೆ ಪೈಪೋಟಿ ನಡೆದಿತ್ತು. ಆದರೆ ಡ್ರೀಮ್ 11 ಕಂಪೆನಿ 222 ಕೋಟಿ ನೀಡಿ ಪ್ರಾಯೋಜಕತ್ವ ಪಡೆದುಕೊಂಡಿದೆ. ಐಪಿಎಲ್ ಅನ್ನು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ. 60 ಪಂದ್ಯ, 51 ದಿನ ಯಾವುದೇ ಪಂದ್ಯಗಳ ಕಡಿತವಿಲ್ಲದೇ ಸಂಪೂರ್ಣ ಟೂರ್ನಿ ನಡೆಯಲಿದೆ