ಇತ್ತೀಚಿನ ಸುದ್ದಿ
17ರಂದು ಸಂತ ಆಗ್ನೇಸ್ ಕಾಲೇಜಿನಲ್ಲಿ ಅಮುಕ್ತ್ ವಾರ್ಷಿಕ ಸಮ್ಮೇಳನ, ಮಹಾಸಭೆ
January 14, 2021, 12:29 PM

ಮಂಗಳೂರು(reporterkarnataka news):
ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು ಅಧ್ಯಾಪಕರ ಸಂಘ ಅಮುಕ್ತ್ ವಾರ್ಷಿಕ ಸಮ್ಮೇಳನ ಇದೆ ಭಾನುವಾರ (ಜ.17)ದಂದು ಬೆಳಿಗ್ಗೆ 11.30 ಗಂಟೆಗೆ ನಗರದ ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ)ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಸಮ್ಮೇಳನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಕೆ. ರಾಜು ಮೊಗವೀರ ಪ್ರಧಾನ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಂಗಳೂರು ವಲಯದ ಶಿಕ್ಷಣ ಜಂಟಿ ನಿರ್ದೇಶಕ ಡಾ.ಅಪ್ಪಾಜಿ ಗೌಡ ಎಸ್. ಬಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ವೆನ್ನಿಸ್ಸಾ ಎ.ಸಿ ಗೌರವಾನಿತ್ವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತಿ ಹೊಂದಿದ,ಪಿ.ಎಚ್.ಡಿ ಪಡೆದ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಪ್ರಾಧ್ಯಾಪಕರನ್ನು ಸನ್ಮಾನಿಸಲಾಗುವುದು.
ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಹಲವು ವಿಚಾರಗಳು ಚರ್ಚಿತವಾಗಲಿದ್ದು,ಪ್ರಮುಖ ನಿರ್ಣಯ/ಠರಾವುಗಳನ್ನು ಮಂಡಿಸಲಾಗುವುದು. ಅಮುಕ್ತ್ ನ್ ವಾರ್ಷಿಕ ಮಹಾಸಭೆಯು ಅಂದು ಬೆಳಿಗ್ಗೆ 10 ಗಂಟೆಯಿಂದ ಇದೇ ಸಭಾಂಗಣದಲ್ಲಿ ನಡೆಯಲಿದೆ.ಈ ಸಮಾವೇಶದಲ್ಲಿ ಅಮುಕ್ತ್ ಸಂಘಟನೆಯ ಎಲ್ಲಾ ಸದಸ್ಯರು ಭಾಗವಹಿಸಬೇಕೆಂದು ಅಧ್ಯಕ್ಷ ಡಾ.ಎನ್.ಎಂ ಜೋಸೆಫ್ ಹಾಗೂ ಪ್ರಧಾನ ಕಾರ್ಯದರ್ಶಿ ಡಾ.ಬಿ.ವಿಶಾಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘದ ಉಪಾಧ್ಯಕ್ಷರು ಗಳಾಗಿ ಅಸೋಸಿಯೇಟ್ ಪ್ರೊ. ಎಸ್.ಎನ್ ಕಾಕತ್ಕರ್, ಅಸಿಸ್ಟೆಂಟ್ ಪ್ರೊ. ದೇಜಮ್ಮ ಎ, ಜಂಟಿ ಕಾರ್ಯದರ್ಶಿ ಗಳಾಗಿಕಾರ್ಯದರ್ಶಿ ಡಾಕ್ಟರ್ ಶೈಲಜಾ ವೈ ವಿ,ಡಾ.ಪ್ರವೀಣ್ ಕಾರ್ಯ ನಿರ್ವಹಿಸುತ್ತಿದ್ದಾರೆ.