9:56 PM Thursday28 - January 2021
ಬ್ರೇಕಿಂಗ್ ನ್ಯೂಸ್
ಬೆಳಗಾವಿ ಅಧಿವೇಶನ ನಡೆಸದೆ ಉತ್ತರ ಕರ್ನಾಟಕದ ನಿರ್ಲಕ್ಷ್ಯ: ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್… ಇಬ್ಬರು ಪುತ್ರಿಯನ್ನು ಬೆತ್ತಲೆಗೊಳಿಸಿ ಬಡಿದು ಸಾಯಿಸಿದ ಪಾಪಿ ದಂಪತಿ ಶಿವ- ಪಾರ್ವತಿಯರಂತೆ!  ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದಿನಿಂದ ಆರಂಭ: ರಾಜ್ಯಪಾಲರ ಭಾಷಣ ಬಂಧನ ಭೀತಿಯಿಂದ ಸಿಎಂ ಯಡಿಯೂರಪ್ಪ, ನಿರಾಣಿ ಬಚಾವ್: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು… ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದ ಡಾ. ಬಿ.ಎಂ. ಹೆಗ್ಡೆ ಅವರಿಗೆ ಸಂಸದ ನಳಿನ್, ಶಾಸಕ ಕಾಮತ್… ಖ್ಯಾತ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು: ಪುನಃ ಕಾಣಿಸಿಕೊಂಡ ಎದೆನೋವು ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೀಡಾದ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆ  ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ

ಇತ್ತೀಚಿನ ಸುದ್ದಿ

ಹೈ ವೋಲ್ಟೇಜ್ ತಂತಿಗೆ ಬೃಹತ್ ವಿದ್ಯುತ್ ಗೋಪುರ: ಬಡವರ ಬದುಕಿಗೆ ಮೆಸ್ಕಾಂ ಕಲ್ಲು

August 3, 2020, 3:10 AM

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಬಡವರ ಬದುಕನ್ನು ಹಾಳು ಮಾಡುವ, ನೆಮ್ಮದಿಗೆ ಕೊಳ್ಳಿ ಇಡುವ ಸರಕಾರದ ಯೋಜನೆಗಳಿಗೇನು ಕಡಿಮೆ ಇಲ್ಲ. ನಗರದ ಹೊರ ವಲಯದ ಜೋಕಟ್ಟೆ ಹಾಗೂ ಮರವೂರು ಗ್ರಾಮ ಪಂಚಾಯಿತಿಗೆ ಸೇರಿದ ಗುಡ್ಡದಲ್ಲಿ ಹೈ ವೋಲ್ಟೇಜ್ ತಂತಿ ಹಾಕಲು ದೈತ್ಯ ಗೋಪುರ ನಿರ್ಮಿಸಲು ಮೆಸ್ಕಾಂ ಮುಂದಾಗಿದ್ದು, ನೆಮ್ಮದಿಯ ಬದುಕಿಗೆ ಕೊಲ್ಲಿ ಇಡಲು ಮುನ್ನುಡಿ ಬರೆದಿದೆ.

ನಗರದ ಹೊರ ವಲಯದ ಜೋಕಟ್ಟೆ ಹಾಗೂ ವರವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗುಡ್ಡೆಯಲ್ಲಿ ಎರಡು, ಮೂರು ಸೆಂಟ್ಸ್ ಭೂಮಿಯಲ್ಲಿ ಬಡವರು ಸಣ್ಣ ಸಣ್ಣ ಮನೆಗಳನ್ನು ಕಟ್ಟಿ ಕೊಂಡು ಬದುಕು ನಡೆಸುತ್ತಿದ್ದಾರೆ. ತಲೆಮಾರುಗಳಿಂದ ಇಲ್ಲಿ ವಾಸವಿರುವ ಇವರ ಮನೆಗಳಿಗೆ ಹಕ್ಕುಪತ್ರ ಸಹಿತ ಎಲ್ಲ ದಾಖಲೆಗಳು ಕೂಡ ಇವೆ. ತಮ್ಮಷ್ಟಕ್ಕೆ ಬದುಕುತ್ತಿದ್ದ ಇವರ ನೆಮ್ಮದಿಯನ್ನು ಮೊದಲು ಕೆಡಿಸಿದ್ದು ಕಣ್ಣಳತೆಯಷ್ಟು ಹತ್ತಿರದಲ್ಲಿ ವಿಸ್ತರಣೆಗೊಂಡ ಎಂಆರ್ ಪಿ ಎಲ್ ಘಟಕದ ಮಾಲಿನ್ಯ. 

ಇದೇ ಗುಡ್ಡದ ಮರವೂರು ಗ್ರಾಮ ಪಂಚಾಯಿತಿವ್ಯಾಪ್ತಿಗೆ ಒಳಪಟ್ಟ  ಕಾಪಿಗುಡ್ಡೆ ಎಂಬಲ್ಲಿ ಅಲೀಮ ಎಂಬವರ  ತೀರಾ ಬಡ ಕುಟುಂಬ ವಾಸಿಸುತ್ತಿದೆ. ಇವರ ಮನೆಯ ಮುಂಭಾಗದಲ್ಲೆ ಏಳೆಂಟು ವರ್ಷದ ಹಿಂದೆ ಮೆಸ್ಕಾಂ ನವರು ಎಸ್ ಇ ಝಡ್,  ಎಂಆರ್ ಪಿ ಎಲ್ ಘಟಕಕ್ಕೆ ವಿದ್ಯುತ್ ಸಾಗಿಸುವ ಬೃಹತ್ ಸರಬರಾಜು ಗೋಪುರವನ್ನು ನಿಯಮಗಳನ್ನು ಉಲ್ಲಂಘಿಸಿ ಹಾಕಿದರು‌ ಎಂದು ಸ್ಥಳೀಯರು ಆರೋಪಿಸುತ್ತಾರೆ. ಇಲ್ಲಿನ ಬಡವರ ಮನೆಗಳ ಮೇಲೆಯೇ ಹೈ ವೋಲ್ಟ್ ವಿದ್ಯುತ್ ತಂತಿಗಳು ಅಪಾಯಕಾರಿಯಾಗಿ ಹಾದು ಹೋಗಿವೆ.. ತಮ್ಮ ಮನೆಯ ಗೇಟಿಗೆ ತಾಗಿಕೊಂಡು ಆಕಾಶದೆತ್ತರದ ಬೃಹತ್ ವಿದ್ಯುತ್ ಗೋಪುರ ತಲೆ ಎತ್ತಿದರೂ ಅಲೀಮ ಕುಟುಂಬ ಮೌನವಾಗಿಯೇ ರೋಧಿಸಿತು.

ಈ ನಡುವೆ, ವರ್ಷದ ಹಿಂದೆ ಎಂಆರ್ ಪಿಎಲ್, ಎಸ್ ಇಝಡ್ ಗಳಿಗೆ ಅಧಿಕ ವಿದ್ಯುತ್ ಪೂರೈಸಲು ಬೇಕಾಗಿ ಗೋಪುರದ ಸಾಮರ್ಥ್ಯವನ್ನು (110 K V) ಹೆಚ್ಚಿಸಲು ಮೆಸ್ಕಾಂ ನಿರ್ಧರಿಸಿತು. ಈ ಬಾರಿಯೂ ಸ್ಥಳೀಯರೊಂದಿಗಾಗಲಿ, ಅಲೀಮ ಅವರೊಂದಿಗಾಗಲಿ ಒಂದು ಮಾತನ್ನೂ ಕೇಳದೆ ಈ ಹಿಂದಿನ ದೈತ್ಯ ಗೋಪುರವನ್ನು ತೆಗೆದು ಅದರ ಎರಡರಷ್ಟು ಗಾತ್ರದ ಬೃಹತ್ ಗೋಪುರವನ್ನು ನಿರ್ಮಿಸಲು ನಿರ್ಧರಿಸಿ ಅಲೀಮ ಅವರ ಮನೆಯ ಸಣ್ಣ ದಾರಿಯಲ್ಲೇ ಗೋಪುರದ ಪಿಲ್ಲರ್ ಗಾಗಿ ಆಳವಾದ ಗುಂಡಿ ತೋಡ ತೊಡಗಿತು.‌ ಇದರಿಂದ ಕಂಗಾಲಾದ ಅಲೀಮ ಮತ್ತವರ ಮಗಳು ಗುತ್ತಿಗೆದಾರನಲ್ಲಿ ‘ನಮಗೆ ಓಡಾಡಲು ರಸ್ತೆ ಎಲ್ಲಿದೆ !?” ಎಂದು ಪ್ರಶ್ನಿಸಿದರೆ,  ‘ಹೇಗಾದರೂ ನುಸುಳಿಕೊಂಡು ಓಡಾಡಿ. ಇದು ಸರಕಾರದ ಕೆಲಸ, ಅಡ್ಡಿಪಡಿಸಿದರೆ ಹುಷಾರ್, ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಧಮ್ಕಿ ಹಾಕಿ ದ್ದರು ಎಂದು ಸ್ಥಳೀಯರು ಆರೋಪಿಸುತ್ತಾರೆ. ವಿಷಯ ಅರಿತ ನಾಗರಿಕ ಹೋರಾಟ ಸಮಿತಿಯು ಮೆಸ್ಕಾಂ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿ ಬಡ ಕುಟುಂಬದ ಮೇಲೆ ದೌರ್ಜನ್ಯ ಎಸಗಿ ನಿರ್ಮಿಸಲು ಉದ್ದೇಶಿಸಿದ ಗೋಪುರದ ಕೆಲಸಕ್ಕೆ ತಡೆಯೊಡ್ಡಿತು.

ಮನೆಯ ದಾರಿ ಮುಚ್ಚುವುದು ಮೂಲಭೂತ ಹಕ್ಕಿನ ಉಲ್ಲಂಘನೆ, ನಿಯಮಗಳನ್ನು ಮೊದಲು ಪಾಲಿಸಿ,  ಬಳಿಕ ಗೋಪುರ ನಿರ್ಮಿಸಿ,  ಅಲ್ಲಿಯವರಗೆ ಗೋಪುರ ನಿರ್ಮಿಸಲು ಅವಕಾಶ ನೀಡಲಾರೆವು ಎಂದು ನಾಗರಿಕ ಸಮಿತಿ ಸ್ಪಷ್ಟ ಮಾತುಗಳಿಂದ ಹೇಳಿತು. ನಂತರ ಸುಮಾರು ಒಂದು ವರ್ಷಗಳ ಕಾಲ ಮನೆಯ ಮುಂದಿನ ರಸ್ತೆಯ ಗುಂಡಿಯನ್ನೂ ಮುಚ್ಚದೆ, ಗೋಪುರ ನಿರ್ಮಾಣವನ್ನು ಮೆಸ್ಕಾಂ ಮುಂದೂಡಿತ್ತು.‌ ಅಲೀಮ ಅವರ ಬಡ ಕುಟುಂಬದ ಶಾಲೆಗೆ ಹೋಗುವ ಮಕ್ಕಳ ಸಹಿತ  ಆಳದ ಗುಂಡಿಯ ಬದಿಯಲ್ಲೇ ಸರ್ಕಸ್ ಮಾಡುತ್ತಾ ಅಪಾಯಕಾರಿಯಾಗಿ ತೆರಳುತ್ತಿದ್ದರು. ಬಾಳ ಗ್ರಾಮ ಪಂಚಾಯಿತಿಗೂ ಲಿಖಿತ ದೂರು ನೀಡಲಾಯಿತು.

ಒಂದು ವರ್ಷ ಸುಮ್ಮನಿದ್ದ ಮೆಸ್ಕಾಂ ಅಧಿಕಾರಿಗಳು ಈಗ ಮತ್ತೆ ಅದೇ ಸ್ಥಳದಲ್ಲಿ ಬೃಹತ್  ವಿದ್ಯುತ್ ಗೋಪುರ ನಿರ್ಮಿಸಲು ಮುಂದಾಗಿದ್ದಾರೆ. ನಿಯಮಗಳನ್ನು ಮುಂದಿಟ್ಟು ಅಲೀಮಾ ಕುಟುಂಬದ ಜತೆ ನಿಲ್ಲಬೇಕಿದ್ದ ಗ್ರಾಮ ಪಂಚಾಯತ್ ಆಡಳಿತ ಮೆಸ್ಕಾಂ ಪರ ನಿಂತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು